ಮನೆ ರಾಜ್ಯ ‘ನಾರಿ ಶಕ್ತಿ ನಾಡಿನ ಶಕ್ತಿ’: ಮಹಿಳೆಯರ ಭರವಸೆ ಬಿಜೆಪಿಯ ಕರಪತ್ರ ಬಿಡುಗಡೆ

‘ನಾರಿ ಶಕ್ತಿ ನಾಡಿನ ಶಕ್ತಿ’: ಮಹಿಳೆಯರ ಭರವಸೆ ಬಿಜೆಪಿಯ ಕರಪತ್ರ ಬಿಡುಗಡೆ

0

ಮೈಸೂರು: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳೆಯರನ್ನು ಸಶಕ್ತೀಕರಣಗೊಳಿಸುವುದು ಬಿಜೆಪಿಯ ಧ್ಯೇಯವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ  ನಂದೀಶ್ ಹೇಳಿದರು

Join Our Whatsapp Group

ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗ ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ತಂಡ ಯೋಜನೆಗಳ ನಾರಿ ಶಕ್ತಿ ನಾಡಿನ ಶಕ್ತಿ ಮಹಿಳೆಯರ ಭರವಸೆಯ ಬಿಜೆಪಿಯ ಕರಪತ್ರವನ್ನು ಬಿಡುಗಡೆಗೊಳಿಸಿ , ನಂತರ ಮನೆಮನೆಗೆ ಭೇಟಿ ನೀಡಿ ಯೋಜನೆಯ ಕರಪತ್ರವನ್ನು ವಿತರಿಸಿ ಮಾತನಾಡಿದರು.

ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಕ್ಕಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇಂದ್ರದಲ್ಲಿ 11 ಮಂದಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದರು.

ಹಿಂದುತ್ವಕ್ಕೆ ಧೈರ್ಯ ಕೊಡುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ ಎಂದರು.

ಈಗಾಗಲೇ ಪ್ರತಿಯೊಂದು ಮನೆಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯ ಮಹಿಳಾ ಮೋರ್ಚ ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ, ಈ ಬಾರಿಯ ಪ್ರಣಾಳಿಕೆಯು ಸಹ ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ನೀಡುವ ಭರವಸೆಯನ್ನು ಕೊಟ್ಟಿದ್ದೇವೆ,  ಇತರೆಲ್ಲರೂ ಕುರಿತು ಮಹಿಳೆಯರಿಗೆ ತಿಳಿಸಿ ಶೇಕಡ 100 ರಷ್ಟು ಮಹಿಳೆಯರು ಬಿಜೆಪಿ ಪರವಾಗಿ ನಿಲ್ಲುವಂತೆ ಪ್ರೇರೇಪಿಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸದಸ್ಯ ಶಿಲ್ಪ ಗಣೇಶ್ ಹಾಗೂ ಮಹಿಳಾಮುರ್ಚ ರಾಷ್ಟ್ರ ಕಾರ್ಯಕಾರಿಣಿ ಸದಸ್ಯೆ ನಳಿನಿ, ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.