ವಾಷಿಂಗ್ಟನ್(Washington): ನಾಸಾ–2022 ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ಅನ್ನು ಪಂಜಾಬ್ ಮತ್ತು ತಮಿಳುನಾಡಿನ ಎರಡು ವಿದ್ಯಾರ್ಥಿಗಳ ತಂಡ ಗೆದ್ದಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.
ಏಪ್ರಿಲ್ 29ರಂದು ವರ್ಚುವಲ್ ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತವು ಈ ಘೋಷಣೆ ಮಾಡಿದೆ.
ಪಂಜಾಬ್‌ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರೆಸಿಡೆನ್ಸಿ ಸ್ಕೂಲ್ ಹೈಸ್ಕೂಲ್ ವಿಭಾಗದಲ್ಲಿ ಸ್ಟೆಮ್ ಎಂಗೇಜ್‌ಮೆಂಟ್ ಪ್ರಶಸ್ತಿಯನ್ನು ಗೆದ್ದರೆ,. ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ಕಾಲೇಜು/ವಿಶ್ವವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ಈ ಸ್ಪರ್ಧೆಯಲ್ಲಿ 58 ಕಾಲೇಜುಗಳು ಮತ್ತು 33 ಪ್ರೌಢಶಾಲೆಗಳಿಂದ 91 ತಂಡಗಳು ಭಾಗವಹಿಸಿದ್ದು, ಸೌರವ್ಯೂಹದಲ್ಲಿನ ಗ್ರಹಗಳ ಕಠಿಣ ಮೇಲ್ಮೈ ಮೇಲೆ ಚಲಿಸುವ ಮಾನವ-ಚಾಲಿತ ರೋವರ್ ಅನ್ನು ವಿನ್ಯಾಸಗೊಳಿಸುವುದು, ಅವುಗಳ ನಿರ್ವಹಣೆ ಮಾಡುವುದು ಅಂತರರಾಷ್ಟ್ರೀಯ ವಿದ್ಯಾರ್ಥಿ ತಂಡಗಳಿಗೆ ಒಡ್ಡಲಾಗಿದ್ದ ಸ್ಪರ್ಧೆಯಾಗಿತ್ತು.