ಮನೆ ಮನೆ ಮದ್ದು ಮೂಗು ನೋವು ರಕ್ತ ಸೋರುವಿಕೆ

ಮೂಗು ನೋವು ರಕ್ತ ಸೋರುವಿಕೆ

0

1. ನೊರೆಹಾಲನ್ನು ರಕ್ತಸ್ರಾವ ಆಗುತ್ತಿರುವಾಗ ಮೂಗಿನ ಹೊಳ್ಳೆಯವಳಲ್ಲಿ ನಾಲ್ಕಾರು ತೊಟ್ಟು ಬಿಡುತ್ತಿದ್ದರೆ ರಕ್ತ ಹೊರಬರುವುದು ನಿಲ್ಲುವುದು.

2. ಮೂಗಿನಲ್ಲಿ ಸ್ವಾಭಾವಿಕವಾಗಿ ರಕ್ತ ಬರುತ್ತಿದ್ದರೆ ತುಪ್ಪದ ಹೀರೇಕಾಯಿ ಪಲ್ಯ ತಿನ್ನುವುದರಿಂದ ನಿಲ್ಲುವುದು.

3. ಬಾಯಿ ಹಾಗೂ ಗುದದ್ವಾರದಲ್ಲಿ ರಕ್ತ ಬರುತ್ತಿದ್ದಾಗಲೂ ಮೇಲ್ಕಂಡ ವಿಧಾನವನ್ನು ಅನುಸರಿಸಬೇಕು.

Join Our Whatsapp Group

 ಮೈ ನವೆ :

1. ಮೈ ನವೆಯನ್ನು ಹೋಗಲಾಡಿಸಲು ಸೀಬೆಯ ಚಿಗುರು ಮತ್ತು ದೊಡ್ಡಪತ್ರೆ ಸೊಪ್ಪನ್ನು ನುಣ್ಣಗೆ ಅರೆದು ಮೈಗೆ ಹಚ್ಚಿಕೊಂಡು ಚೆನ್ನಾಗಿ ತಿಕ್ಕಿದ ನಂತರ ಬಿಸಿ ಬಿಸಿ ನೀರಿನ ಸ್ಥಾನ ಮಾಡಬೇಕು.

2. ಅರಿಶಿನ ಮತ್ತು ಗರಿಕೆ ಹುಲ್ಲನ್ನು ಹಸುವಿನ ಹಾಲಿನಲ್ಲಿ ಅರೆದು, ನವೆ ಆಗುತ್ತಿರುವ ಜಾಗದಲ್ಲಿ ಹಚ್ಚಿದರೆ ವಾಸಿಯಾಗುವುದು.

3. ಎಲೆಕೋಸನ್ನು ಹಸಿದಾಗಿಯೇ ತಿನ್ನುತ್ತಿದ್ದರೆ ಮೈ ನವೇ ಕಡಿಮೆ ಆಗುವುದು.

4. ಸೋರೆಕಾಯಿಯ ರಸವನ್ನು ಮೈನವೇ ಇರುವ ಜಾಗದಲ್ಲಿ ಲೇಪಿಸುವುದರಿಂದಲೂ ಪರಿಣಾಮಕಾರಿಯಾದ ಪ್ರಯೋಜನ ಉಂಟು.

ರಕ್ತದ ಒತ್ತಡ :

1. ಬೀಟ್ರೂಟ್ ಅನ್ನು ಪ್ರತಿದಿನವೂ ಬಳಸುತ್ತಿದ್ದಾರೆ ರಕ್ತದ ಒತ್ತಡ ಕಡಿಮೆ ಆಗುವುದು.

2. ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸದಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತದ ಒತ್ತಡದ ರೋಗವು ಕಡಿಮೆ ಆಗುವುದು.