ಮನೆ ಸುದ್ದಿ ಜಾಲ ನಾಗರಿಕರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಸ್ಪರ್ಧೆ

ನಾಗರಿಕರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಸ್ಪರ್ಧೆ

0

ನವದೆಹಲಿ: ನಾಗರಿಕರ ಪ್ರತಿಭೆ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡಲು ಮತ್ತು ಚುನಾವಣಾ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ‘ನನ್ನ ಮತವು ನನ್ನ ಭವಿಷ್ಯ: ಒಂದು ಮತದ ಶಕ್ತಿ’ಎಂಬ ಶೀರ್ಷಿಕೆಯಡಿ ರಾಷ್ಟ್ರವ್ಯಾಪಿ ಸ್ಪರ್ಧೆ ಆಯೋಜಿಸಿದೆ.

ಸ್ಪರ್ಧೆಯಲ್ಲಿ ಐದು ವಿಭಾಗಗಳಿವೆ. ಕ್ವಿಜ್‌, ಘೋಷಣೆ, ಹಾಡು, ವಿಡಿಯೊ ಮತ್ತು ಪೋಸ್ಟರ್‌ ಸ್ಪರ್ಧೆಗಳನ್ನು ನಡೆಸಲಾಗುವುದು. ಸ್ಪರ್ಧೆಗೆ ಹೆಸರು ನೋಂದಾಯಿಸಲು ಫೆ.15 ಕೊನೆಯ ದಿನ ಎಂದು ದಹೆಲಿ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್‌ ಹೇಳಿದ್ದಾರೆ.

ಎಲ್ಲ ವಿಭಾಗಗಳಲ್ಲಿಯೂ ಮೂವರು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಕಲಾವಿದರು ಮತ್ತು ಹಾಡುಗಾರರು ಸಂಗೀತ ಉಪಕರಣಗಳನ್ನು ಬಳಸಲು ಅವಕಾಶ ಇದೆ. ಹಾಡುಗಳು 3 ನಿಮಿಷ ಮೀರುವಂತಿಲ್ಲ. ವಿಡಿಯೊ ಮಾಡುವವರು ಭಾರತದ ಚುನಾವಣೆಗಳ ವೈವಿಧ್ಯ, ಸಂಭ್ರಮವನ್ನು ಒಳಗೊಳ್ಳಲು ಯತ್ನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಿಡಿಯೊ ಕಳುಹಿಸುವವರು ಒಂದು ನಿಮಿಷದ ಕಿರು ವಿಡಿಯೊ ಕಳುಹಿಸಿದರೆ ಉತ್ತಮ ಎಂದು ಸಿಂಗ್‌ ಹೇಳಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಸ್ಪರ್ಧೆಯ ಬಗ್ಗೆ ಜನರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.