ಮನೆ ಆರೋಗ್ಯ ಪ್ರಕೃತಿ ಚಿಕಿತ್ಸೆಗಳು

ಪ್ರಕೃತಿ ಚಿಕಿತ್ಸೆಗಳು

0

ಮಣ್ಣಿನ ಚಿಟ್ಟೆಗಳು

Join Our Whatsapp Group

1.ಮರಳಿಲ್ಲದ ಒಂದು ಚಮಚ ಜೇಡಿ  ಮಣ್ಣನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕದಡಿ 10 ದಿನಗಳ  ಕಾಲ ಸೇವಿಸಿದರೆ ದೇಹ ಶುದ್ದಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

2 ಜೇಡಿ ಮಣ್ಣನ್ನು ಬಿಸಿ ಮಾಡಿ ಕುರುವಿಗೆ ಹಚ್ಚುತ್ತಿದ್ದರೆ ಕುರುವು ಮೆತ್ತಗಾಗಿ ಒಡೆದು ಕೀವು ಆಚೆ ಬಂದು ಕುರು ಬೇಗ ವಾಸಿಯಾಗುತ್ತದೆ.

3. ಜಿಡಿ ಮಣ್ಣನ್ನು ಕಲಸಿ ಬೆನ್ನು ಕುಣಿಗೆ ಹಚ್ಚುತ್ತಿದ್ದರೆ ಬೆನ್ನು ಪಾಣಿ ಶೀಘ್ರ ಗುಣವಾಗುತ್ತದೆ.

4. ಜೆಡಿ ಮಣ್ಣನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಮೂತ್ರಕೋಶದಲ್ಲಿ ಉತ್ಪತ್ತಿಯಾದ ಕಲ್ಲುಗಳು ಕರಗಿ ಮೂತ್ರದ ಮೂಲಕ ಹೊರ ಬರುತ್ತವೆ.

5. ಜೇಡಿ ಮಣ್ಣಿನ ಪೇಸ್ಟನ್ನು ಸ್ವಲ್ಪ ಬಿಸಿ ಮಾಡಿ ಕಣ್ಣುರಪ್ಪೆಯ ಮೇಲೆ ಇಟ್ಟುಕೊಂಡು ಮಲಗಿ ವಿಶ್ರಾಂತಿ ತೆಗೆದುಕೊಂಡರೆ ಕಣ್ಣು ಉರಿ ನಿವಾರಣೆಯಾಗುತ್ತದೆ.

6. ಕಲಸಿದ ಜೇಡಿ ಮಣ್ಣನ್ನು ಹೊಕ್ಕಲಿನ ಸುತ್ತಲೂ ಹಚ್ಚಿಕೊಂಡು ಆಗಾಗ ಅದರ ಮೇಲೆ ನೀರು ಚಿಮಿಕಿಸುತ್ತಿದ್ದರೆ ಭೇದಿ ನಿಂತು ಹೋಗುತ್ತದೆ.

7. ಶುದ್ಧವಾದ ಮಣ್ಣನ್ನು ಒಂದು ತೆಳು ಬಟ್ಟೆಗೆ ಲೇಪಿಸಿ ಅದನ್ನು ಹಣೆಯ ಮೇಲೆ ಇಟ್ಟುಕೊಂಡು ಮಲಗಿದರೆ ನಿದ್ರಾನಾಶ,ತಲೆ ಸುತ್ತು, ತಲೆನೋವು, ಮೂಗಿನಿಂದ ತಾನಾಗಿಯೇ ರಕ್ತ ಸೋರುವುದು. ಅಧಿಕ ರಕ್ತದೊತ್ತಡ ರೋಗಗಳು  ನಿವಾರಣೆಯಾಗುತ್ತವೆ.

8. ಕಿಬ್ಬೊಟ್ಟೆಯ ಮೇಲೆ ಮಣ್ಣು ಲೇಪಿಸಿದ ವಸ್ತ್ರವನ್ನು ಇಟ್ಟುಕೊಂಡುವಿಶ್ರಾಂತಿ ತೆಗೆದುಕೊಳ್ಳುವುದರಿಂದ ಗ್ಯಾಸ್ಟ್ರಬಲ್ ಅಲ್ಸರ್  ಮೊದಲಾದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ. ಬರಿ ಹೊಟ್ಟೆಯಲ್ಲಿರುವಾಗ ಈ ಚಿಕಿತ್ಸೆ  ಮಾಡುವುದು ಒಳ್ಳೆಯದು.

9. ಗುದದ ಮೇಲೆ ಮಣ್ಣು ಲೇಪಿಸಿದ ವಸ್ತ್ರವನ್ನು ಇಟ್ಟುಕೊಳ್ಳುವುದರಿಂದ ಮೂಲವ್ಯಾದಿಯಲ್ಲಿ ಸೋರುವ ರಕ್ತ ನಿಂತು ಹೋಗುತ್ತದೆ.

10. ಕೆಮ್ಮಣ್ಣನ್ನು ಬಿಸಿ ಮಾಡಿ ಉಡುಕಿದ ಜಾಗಕ್ಕೆ ಲೇಪಿಸಿ ಕೆಲಕಾಲದ ನಂತರ ಬಿಸಿ ನೀರಿನ ಕಾಪಟ ಕೊಟ್ಟರೆ ಉಳುಕು ನೋವು ನಿವಾರಣೆಯಾಗುತ್ತದೆ.