ಮನೆ Uncategorized ಉಕ್ರೇನ್ ನಿಂದ ನವೀನ್ ಪಾರ್ಥಿವ ಶರೀರ ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮನ: ಸಿಎಂ ಬೊಮ್ಮಾಯಿ

ಉಕ್ರೇನ್ ನಿಂದ ನವೀನ್ ಪಾರ್ಥಿವ ಶರೀರ ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮನ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾದ ಶೆಲ್ ದಾಳಿಯಿಂದ ಮೃತಪಟ್ಟ ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಗೌಡ ಗ್ಯಾನಗೌಡರ್ ಪಾರ್ಥಿವ ಶರೀರ ಇದೇ ತಿಂಗಳ 21 ಸೋಮವಾರದಂದು ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಸಾಧ್ಯತೆಯಿದೆ.

ಪಾರ್ಥಿವ ಶರೀರ ರವಾನೆಗೆ ಅಗತ್ಯವಾದ ಎಲ್ಲಾ ಕಾಗದ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಶನಿವಾರ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ದಿ. 21-3-2022, ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ. 

ಉಕ್ರೇನ್ ನ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನವೀನ್ ಶೇಖರಪ್ಪ ಗ್ಯಾನಗೌಡರ್ ಮಾರ್ಚ್ 21 ರಂದು ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ನವೀನ್ ಅವರ ಪಾರ್ಥಿವ ಶರೀರವನ್ನು ಪಡೆಯಲು ಅಂತ್ಯಕ್ರಿಯೆ ಏಜೆಂಟ್  ನೇಮಿಸಿದೆ ಎಂದು ರಾಜ್ಯ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಗತ್ಯ ಕಾಗದ ಕೆಲಸವನ್ನು ಪೂರ್ಣಗೊಳಿಸಿ ಅದನ್ನು ವಾರ್ಸಾ ಗೆ ಸಾಗಿಸಲಾಯಿತು. ಇದಲ್ಲದೆ, ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಅಂತ್ಯಕ್ರಿಯೆಯ ಏಜೆಂಟ್ ಭಾರತಕ್ಕೆ ಪಾರ್ಥಿವ ಶರೀರ ಸಾಗಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಮಾರ್ಚ್ 21, 2022 ರಂದು ಮುಂಜಾನೆ ಮೂರು ಗಂಟೆಗೆ  ಎಮಿರೇಟ್ಸ್ ಫ್ಲೈಟ್ ಸಂಖ್ಯೆ EK0568 ಮೂಲಕ ನವೀನ್ ಶೇಖರಪ್ಪ ಗ್ಯಾನಗೌಡರ್ ಪಾರ್ಥಿವ ಶರೀರ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿದೆ  ಎಂದು ಯುರೇಷಿಯಾ ಎಂಇಎ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ. 

ಹಿಂದಿನ ಲೇಖನನೈತಿಕ ಶಿಕ್ಷಣಕ್ಕೆ ನಮ್ಮ ವಿರೋಧವಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ
ಮುಂದಿನ ಲೇಖನವರ್ಷದ ಮೊದಲ ಮಳೆಗೆ ಬಲಿ: ಸಿಡಿಲು ಬಡಿದು ರೈತ ಸಾವು