ಹೊಸದಿಲ್ಲಿ:ಭಾರತೀಯ ನೌಕಾಪಡೆಯ ಬದ್ಧತೆಯು ರಾಷ್ಟ್ರದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ(ಡಿ4) ಶ್ಲಾಘಿಸಿದ್ದಾರೆ.
“ನೌಕಾಪಡೆಯ ದಿನದಂದು ಎಕ್ಸ್‌ನಲ್ಲಿ ”ನಮ್ಮ ಸಮುದ್ರಗಳನ್ನು ಸರಿಸಾಟಿಯಿಲ್ಲದ ಧೈರ್ಯ ಮತ್ತು ಸಮರ್ಪಣಾಭಾವದಿಂದ ರಕ್ಷಿಸುವ ಭಾರತೀಯ ನೌಕಾಪಡೆಯ ಧೀರ ಸಿಬಂದಿಯನ್ನು ನಾವು ವಂದಿಸುತ್ತೇವೆ. ಅವರ ಬದ್ಧತೆಯು ನಮ್ಮ ರಾಷ್ಟ್ರದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ಭಾರತದ ಶ್ರೀಮಂತ ಕಡಲ ಇತಿಹಾಸದ ಬಗ್ಗೆ ನಾವು ಹೆಮ್ಮೆಪಡುತ್ತೇವೆ, ”ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ನೌಕಾಪಡೆಯ ದಿನವನ್ನು ದೇಶದ ರಕ್ಷಣೆಯಲ್ಲಿ ನೌಕಾಪಡೆಯ ಪ್ರಮುಖ ಪಾತ್ರದ ಅಂಗೀಕಾರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 1971 ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನದ ವಿರುದ್ಧ ಶತ್ರು ಪಡೆಗಳ ಮೇಲೆ ಭಾರೀ ನಷ್ಟವನ್ನು ಉಂಟುಮಾಡಿದ ಶೌರ್ಯವನ್ನು ಸ್ಮರಿಸಲು ಡಿಸೆಂಬರ್ 4 ಅನ್ನು ಆಯ್ಕೆಮಾಡಲಾಗಿದೆ.