ಮನೆ ಕಾನೂನು ‘ನ್ಯಾಯʼ ಸಂಸ್ಥೆಯಿಂದ ಸಂವಿಧಾನ್‌ ಫೆಲೋಶಿಪ್‌ಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್‌ 20ರ ಗಡುವು

‘ನ್ಯಾಯʼ ಸಂಸ್ಥೆಯಿಂದ ಸಂವಿಧಾನ್‌ ಫೆಲೋಶಿಪ್‌ಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್‌ 20ರ ಗಡುವು

0

ಸಾಂವಿಧಾನಿಕ ಹಕ್ಕುಗಳು ಮತ್ತು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ ಸರಳ ಮತ್ತು ಕಾರ್ಯ ಸಾಧ್ಯವಾದ ಮಾಹಿತಿಯ ಮೂಲಕ ಕಾನೂನು ಅರಿವು ಮೂಡಿಸುತ್ತಿರುವ ʼನ್ಯಾಯʼ ಸಂಸ್ಥೆಯು ʼಸಂವಿಧಾನ್‌ ಫೆಲೋಶಿಪ್‌ʼಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 20 ಕೊನೆಯ ದಿನವಾಗಿದೆ.

Join Our Whatsapp Group

2022-23ನೇ ಸಾಲಿನ ಸಂವಿಧಾನ ಫೆಲೋಶಿಪ್ ಕೆಲಸಗಳು ಧನಾತ್ಮಕ ಬದಲಾವಣೆ ತಂದಿರುವುದರಿಂದ ಎರಡನೇ ಸಮೂಹಕ್ಕಾಗಿ ನ್ಯಾಯ ಸಂಸ್ಥೆಯು ಅರ್ಜಿ ಆಹ್ವಾನಿಸಿದೆ. ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ಮಹಿಳೆಯರು ಮತ್ತು ಪುರುಷರಿಗೆ ವಿಶೇಷ ಆದ್ಯತೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್‌ ನೀಡಲಾಗುತ್ತದೆ. ಮೂರು ವರ್ಷಗಳ ವಕೀಲಿಕೆಯ ಅನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕು. ಅರ್ಜಿದಾರರು ಕನ್ನಡದಲ್ಲಿ ಸರಾಗವಾಗಿ ಮಾತನಾಡುವಂತಿರಬೇಕು. ತಳಮಟ್ಟದಲ್ಲಿ ಕೆಲಸ ಮಾಡುವ ಬದ್ಧತೆ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಈ ಲಿಂಕ್‌ಗೆ ಭೇಟಿ ನೀಡಬಹುದಾಗಿದೆ. https://kannada.nyaaya.org/access-to-justice-network/samvidhaan-fellowship/. ಹೆಚ್ಚಿನ ಮಾಹಿತಿಗೆ ಶಿರೀಷ ಬಿ. ರೆಡ್ಡಿ (ಈ-ಮೇಲ್‌: shirisha@nyaaya.in) ಅವರನ್ನು ಸಂಪರ್ಕಿಸಬಹುದಾಗಿದೆ.