ಮನೆ ಕಾನೂನು ಮೈಕ್ರೋ ಫೈನಾನ್ಸ್ ಕಿರುಕುಳದ ಪ್ರಕರಣಗಳು ವರದಿಯಾದರೆ ಅಗತ್ಯ ಕ್ರಮ: ಪೊಲೀಸ್ ಕಮಿಷನರ್​ ದಯಾನಂದ್

ಮೈಕ್ರೋ ಫೈನಾನ್ಸ್ ಕಿರುಕುಳದ ಪ್ರಕರಣಗಳು ವರದಿಯಾದರೆ ಅಗತ್ಯ ಕ್ರಮ: ಪೊಲೀಸ್ ಕಮಿಷನರ್​ ದಯಾನಂದ್

0

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳದ ಪ್ರಕರಣಗಳು ಬೆಂಗಳೂರಿನಲ್ಲಿ ಇದುವರೆಗೂ ವರದಿಯಾಗಿಲ್ಲ. ಅಂತಹ ಪ್ರಕರಣಗಳು ವರದಿಯಾದರೆ ಸೂಕ್ತ ಸ್ಪಂದನೆ ನೀಡುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

Join Our Whatsapp Group

ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳದ ಪ್ರಕರಣಗಳು ರಾಜ್ಯದ ವಿವಿಧೆಡೆ ವರದಿಯಾಗಿವೆ. ಆದ್ದರಿಂದ ಕೆಲವು ಗೈಡ್ ಲೈನ್ಸ್ ಜಾರಿಗೊಳಿಸುವುದರ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆಗಳು ನಡೆದಿವೆ. ಅವುಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಿದರು.

ಅಲ್ಲದೇ ಮೀಟರ್ ಬಡ್ಡಿ ದಂಧೆಯ ವಿರುದ್ಧವೂ ಈಗಾಗಲೇ ಕೋ ಆಪರೇಟಿವ್ ಸೊಸೈಟಿಗಳ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು. ಪೊಲೀಸರಿಗೆ ವಿಶೇಷ ಅಧಿಕಾರ – ಗೃಹ ಸಚಿವ ಪರಮೇಶ್ವರ್​: ಮೈಕ್ರೋ ಫೈನಾನ್ಸ್​ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೋಮವಾರ ತಿಳಿಸಿದ್ದರು.