ಮನೆ ಮಕ್ಕಳ ಶಿಕ್ಷಣ ಬದಲಾವಣೆಯ ಅಗತ್ಯ

ಬದಲಾವಣೆಯ ಅಗತ್ಯ

0

 ವೃದ್ರಾಶ್ರಮದಲ್ಲಿ ಒಬ್ಬಂಟಿಯಾಗಿದ್ದ ಒಬ್ಬ ಹಿರಿಯರು ಪತ್ರಕರ್ತರೊಬ್ಬ ರ ಬಳಿ ಮಾತನಾಡುತ್ತಾ ಈ ರೀತಿ ಹೇಳಿದರಂತೆ ;

Join Our Whatsapp Group

“ ನನ್ನ ಬಾಲ್ಯದಲ್ಲಿ ನಾನು ವಿಶ್ವವನ್ನೇ ಬದಲಾಯಿಸಬೇಕೆಂದುಕೊಳ್ಳುತ್ತಿದ್ದೆ.ಆದರೆ ಚಿಕ್ಕ ಹುಡುಗನಾದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಯೌವ್ವನದಲ್ಲೂ ಕೂಡಾ ಇಂತಹ ಆಲೋಚನೆಗಳು ಬಂದವು. ತಪ್ಪು ಮಾಡಿದವರನ್ನು, ಭ್ರಷ್ಟರನ್ನು ತುಂಡು ತುಂಡಾಗಿ ಕತ್ತರಿಸಿ ಹದ್ದು ಕಾಗೆಗಳಿಗೆ ಹಾಕಬೇಕೆಂಬ ಆವೇಶ, ಅನಿಸಿಕೆ ಬಹಳ ತೀವ್ರವಾಗಿತ್ತು.ಆದರೆ ಸಾಧ್ಯವಾಗಲಿಲ್ಲ. ಇಡೀ ವಿಶ್ವವನ್ನು ಬದಲಾಯಿಸುವುದು ನಮ್ಮ ಕೈಯಲ್ಲಿಲ್ಲ.

 ಕನಿಷ್ಠ ನಮ್ಮ ದೇಶವನ್ನಾದರೂ ಬದಲಾಯಿಸಬೇಕೆಂಬ ಆಸೆ ಬಹಳ ಬಲವಾಗಿತ್ತು ಅಕ್ರಮವಾಗಿ ಅಡ್ಡ ದಾರಿಗಳಲ್ಲಿ ಆಸ್ತಿ ಸಂಪತ್ತುಗಳನ್ನು ಸಂಪಾದಿಸುವ ಭ್ರಷ್ಟ ರಾಜಕಾರಣಿಯರನ್ನು ಗುಂಡಿಟ್ಟು ಸಾಯಿಸಿಬಿಡಬೇಕೆಂದುಕೊಂಡೆ.ಅದೂ ಸಾಧ್ಯವಾಗಲಿಲ್ಲ.

    ಕೊನೆಗೆ ನಮ್ಮ ರಾಜ್ಯವನ್ನಾದರೂ ಚೆನ್ನಾಗಿ ಮಾಡಬೇಕೆಂದುಕೊಂಡೆ. ನಮ್ಮ ರಾಜ್ಯದಲ್ಲಿ ರಾಜಕೀಯ ವ್ಯಕ್ತಿಗಳು, ಪ್ರಮುಖ ಸಿನಿಮಾ ನಟರು, ಅವರವರ ಮಕ್ಕಳನ್ನು ಆಯಾರಂಗಗಳಲ್ಲಿ ತೊಡಗಿಸಿ ಅವರಲ್ಲಿ, ಪ್ರತಿಭೆ, ನೈಪುಣ್ಯತೆಗಳಿ ಲ್ಲದಿದ್ದರೂ, ತಮ್ಮ ಮಟ್ಟಕ್ಕೆ ಅವರನ್ನು ತಂದು ನಿಲ್ಲಿಸಬೇಕೆಂದು ನಾಗರೀಕರನ್ನು ಸಂಕಷ್ಟಕ್ಕೀಡು ಮಾಡುತ್ತಾರೆ. ಅವರನ್ನು ಬದಲಾಯಿಸಿಲಿಕ್ಕಾಗಲಿಲ್ಲ.

      ಕೊನೆ ಪಕ್ಷ  ನಾನು ಹುಟ್ಟಿದ ಊರನ್ನು ಊರಿನವರನ್ನು ಸರಿಪಡಿಸಬೇಕೆಂದು ಉತ್ತಮ ಮಾರ್ಗಕ್ಕೆ ತರಬೇಕೆಂದುಕೊಂಡೆ.ಕೊನೆಪಕ್ಷ ಅಗತ್ಯ ಬಿದ್ದರೆ ಅವರುಗಳ ಒಳಿತಿಗೆ  ತುಪಾಕಿಯನ್ನು ಕೈಗೆತ್ತಿಕೊಳ್ಳಬೇಕೆಂದುಕೊಂಡೆ. ಊಹುಂ… ಅದೂ ಸಾಧ್ಯವಾಗಲಿಲ್ಲ.

     ಕೊನೆಗೆ ನನ್ನ ಕುಟುಂಬದ ಸದಸ್ಯರನ್ನು ನಾನು ಹೆತ್ತು ಸಾಕಿ, ಸಲುಹಿದ ನನ್ನ ಮಕ್ಕಳನ್ನಾದರೂ ಬದಲಾಯಿಸಬೇಕೆಂದುಕೊಂಡೆ.ಅದನ್ನೂ ಮಾಡಲಾಗಲಿಲ್ಲ. ಅವರು ಬಹಳ ದೊಡ್ಡ ಮನಸ್ಸು ಮಾಡಿ ನನ್ನನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋದರು.

      ಇಲ್ಲಿಗೆ ಬಂದ ನಂತರ ನಾನು ತಿಳಿದುಕೊಂಡ ಸತ್ಯವೇನೆಂದರೆ ಮುಖ್ಯವಾಗಿ ನಾನು ಬದಲಾದರೆ ಸಾಕು. ಈ ವಿಶ್ವವನ್ನೆಲ್ಲಾ ಬೇರೊಂದು ದೃಷ್ಟಿಕೋನದಲ್ಲಿ ನೋಡುತ್ತಿದ್ದೆ… ”ಎಂದು ಹೇಳಿ ಮುಗಿಸಿದರು.

 ಮಾಡಿಸುತ್ತಿರುತ್ತಾರೆ. ಅದು ಆ ಮಗುವಿನ ಸಹಜ ಸಾಮರ್ಥ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಊಟ,ತಿಂಡಿ ಮಾಡುವಂತಹ ಮುಖ್ಯ ಕೆಲಸಗಳನ್ನು ಹೊರತುಪಡಿಸಿ, ಉಳಿದವುಗಳನ್ನು ಎಡಕೈಯಿಂದಲೇ ಮಾಡಲು ಬಿಡಿ. ಎಡಗೈ ಅಭ್ಯಾಸವಿರುವವರು ಬಹಳಷ್ಟು ಅದ್ಭುತಗಳನ್ನು ಮಾಡಬಲ್ಲರು.

    * ಮಕ್ಕಳಲ್ಲಿ ಕುತೂಹಲ ಅಧಿಕವಾಗಿರುತ್ತದೆ ಅದೇನೇ?ಇದೇನೇ? ಎಂದು ಪದೇ ಪದೇ ಕೇಳುತ್ತಿರುತ್ತಾರೆ ಬಹುಶಃ  ಇದೇ ಪ್ರಶ್ನೆಯನ್ನು ಎಲ್ಲಾ ದೇಶಗಳ ಮಕ್ಕಳು ಕೇಳಬಹುದೇನೋ. ಅದಕ್ಕೆ ಅವರಿಗಾಗಿ “Tell me why”ಎಂಬ ಹೆಸರಿನಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಅಂದರೆ,ಮಕ್ಕಳು ಕೇಳಿದವುಗಳಿಗೆ ಸಹನೆಯಿಂದ ಉತ್ತರ ಹೇಳಲೇಬೇಕು. “ಬಾಯಿ ಮುಚ್ಚು, ನಿನಗಿದೆಲ್ಲಾ  ಅನಗತ್ಯ” ಗಳಂತಹ ಬೆದರಿಕೆ ಉತ್ತರಗಳು ಬೇಡ.

  *  ದೊಡ್ಡ ಮಕ್ಕಳಲ್ಲೂ ಕೂಡಾ ಕೆಲವರಲ್ಲಿ ದೆವ್ವ, ಭೂತಗಳ ಭಯ ಇರುತ್ತದೆ. ಅದಕ್ಕೆ ಕಾರಣ ಮನೆಯಲ್ಲಿ ಅಜ್ಜ, ಅಜ್ಜಿಯಂದಿರು ಹೇಳಿದ ಕತೆಗಳಾಗಿರಬಹುದು. “ನೀನೀಗ ಅನ್ನ ತಿನ್ನದಿದ್ದರೆ ಗುಮ್ಮನನ್ನು ಕರೀತೀನಿ”, “ ದೆವ್ವ ಬಂದು ನಿನ್ನನ್ನು ಎತ್ಕೊಂಡು ಹೋಗುತ್ತದೆ”, “ ಅಲ್ನೋಡು,ಮನೆ ಆಚೆ ಕತ್ತಲಲ್ಲಿ ನಿಂತಿದೆ”  ಇಂತಹ ಮಾತುಗಳು ದೆವ್ವದ ಭಯವನ್ನು ಸೃಷ್ಟಿಸುತ್ತೇವೆ. ಅದರ ಬದಲು “ನೀನು ಸರಿಯಾಗಿ ಅನ್ನ ತಿಂದರೆ ನೀನೇ ಸೂಪರ್ ಮ್ಯಾನ್ ಆಗ್ತೀಯಾ, ನಿನಗಗ್ಯಾವುದೇ ಭಯ ಇರೋದಿಲ್ಲ” ಎನ್ನಬೇಕು.