ಸದ್ಯ ಆನ್ಲೈನ್ನಲ್ಲಿ ಸ್ಕ್ಯಾನ್ ಮಾಡುವ, ಡಿಜಿಟಲ್ ಪಠ್ಯವನ್ನಾಗಿ ಪರಿವರ್ತಿಸುವ ಥರ್ಡ್ ಪಾರ್ಟಿ ಆ್ಯಪ್ಗಳು ಬಹಳಷ್ಟಿವೆ. ಆದರೆ ಇವುಗಳನ್ನು ಆ್ಯಂಡ್ರಾಯ್ಡ್ ಫೋನ್ಗೆ ಮಾತ್ರ ಡೌನ್ಲೋಡ್ ಮಾಡಿ ಬಳಸಲು ಸಾಧ್ಯವಾಗುತ್ತದೆ.
ಆದರೆ ಐಫೋನ್ ಬಳಕೆದಾರರಿಗೆ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡಿ ಬಳಸಲು ಸಾಧ್ಯವಿಲ್ಲ.ಆದರೆ ಐಫೋನ್ ಬಳಕೆದಾರರು ಚಿಂತಿಸುವ ಅಗತಯವಿಲ್ಲ. ಏಕೆಂದರೆ ಐಫೋನ್ನಲ್ಲಿಯೇ ಈ ಆಯ್ಕೆಯನ್ನು ನೀಡಲಾಗಿದೆ.
ಇದರಲ್ಲಿ ಸ್ಕ್ಯಾನರ್ ಇದ್ದು, ಡಿಜಿಟಲ್ ಪಠ್ಯಗಳನ್ನು ಪರಿವರ್ತಿಸಬಹುದಾದ ಆಯ್ಕೆಯನ್ನು ಹೊಂದಿದೆ. ತರಗತಿಯಲ್ಲಿ ಅಥವಾ ಸಭೆಯ ಸಮಯದಲ್ಲಿ ನೀವು ಎಲ್ಲವನ್ನೂ ಟೈಪ್ ಮಾಡಬೇಕಾಗಿಲ್ಲ, ಐಫೋನ್ನ ಕ್ಯಾಮೆರಾ ತೆರೆದರೆ ಸಾಕು ಡಿಜಿಟಲ್ ಟೆಕ್ಸ್ಟ್ ಗಳಾಗಿ ಪರಿವರ್ತಿಸಬಹುದು.
ಹಿಂದೆಲ್ಲಾ ಕಾಗದದ ಮೇಲೆ ಬರೆದಿರುವುದನ್ನು, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮೇಲೆ ಟೈಪ್ ಮಾಡಿ ನಂತರ ಅದರ ಪ್ರಿಂಟೌಟ್ ತೆಗೆಯಬೇಕಾಗಿತ್ತು. ಆದರೆ ಈಗ ಹಾಗಿಲ್ಲ. ಕೈಯಾರೆ ಬರೆದಿರುವ ಪಠ್ಯವನ್ನ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸಬಹುದಾಗಿದೆ. ಆದರೆ ಐಫೋನ್ ಬಳಕೆದಾರರು ಈ ಸೇವೆಯನ್ನು ಹೇಗೆ ಪಡೆದುಕೊಳ್ಳುವುದು ಮತ್ತು ಸುಲಭ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.
ಮೊದಲಿಗೆ ನಿಮ್ಮ iPhone ನಲ್ಲಿ ‘ನೋಟ್’ ಅಪ್ಲಿಕೇಶನ್ ತೆರೆಯಿರಿ.
ನಂತರ ಹೊಸ ಟಿಪ್ಪಣಿಯನ್ನು (ನ್ಯೂ ನೋಟ್) ಅನ್ನು ತೆರೆಯಿರಿ. ಬಳಿಕ ಅಕ್ಷರವನ್ನು ಟೈಪ್ ಮಾಡಿ.
ನಂತರ ನೀವು ಕೆಳಗೆ ಕ್ಯಾಮೆರಾ ಐಕಾನ್ ಅನ್ನು ಕಾಣಬಹುದು. ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ. “ಸ್ಕ್ಯಾನ್ ಟೆಕ್ಸ್ಟ್” ಆಯ್ಕೆಯನ್ನು ಟ್ಯಾಪ್ ಮಾಡಿ. ಕ್ಯಾಮೆರಾ ತೆರೆಯುತ್ತದೆ. ನಿಮ್ಮ ಕೈಯಾರೆ ಬರೆದ ಪಠ್ಯದ ಕಡೆಗೆ ಕ್ಯಾಮೆರಾವನ್ನು ತಿರುಗಿಸಿ.
ಪಠ್ಯವನ್ನು ಸಂಪೂರ್ಣವಾಗಿ ಗುರುತಿಸಲು ಕ್ಯಾಮೆರಾ ಕೆಲವು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದು ಬರೆದಿರುವ ಪಠ್ಯವನ್ನು ಪತ್ತೆಹಚ್ಚುವವರೆಗೆ ನಿರೀಕ್ಷಿಸಿ ಮತ್ತು ನಂತರ ಕ್ಯಾಪ್ಚರ್ ಮೆನುವನ್ನು ಟ್ಯಾಪ್ ಮಾಡಿ.
ಬಳಿಕ ಅಪ್ಲಿಕೇಶನ್ ನಿಮ್ಮ ಕೈಬರಹದ ಪಠ್ಯವನ್ನು ಡಿಜಿಟಲ್ ಪಠ್ಯವಾಗಿ ನಮೂದಿಸುತ್ತದೆ.