ಮನೆ ಕಾನೂನು NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ

NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜಾರ್ಖಂಡ್‌ ನಲ್ಲಿ ಪತ್ರಕರ್ತನ ಬಂಧನ

0

ದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಶನಿವಾರ ಜಾರ್ಖಂಡ್‌ ನ ಹಜಾರಿಬಾಗ್‌ ನಲ್ಲಿ ಪತ್ರಕರ್ತರೊಬ್ಬರನ್ನು ಬಂಧಿಸಿದೆ.

Join Our Whatsapp Group

ಈತನನ್ನು ಜಮಾಲುದ್ದೀನ್ ಎಂದು ಗುರುತಿಸಲಾಗಿದ್ದು ಹಿಂದಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಬಂಧಿಸಲಾದ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರಿಗೆ ಈತ ಸಹಾಯ ಮಾಡಿದ್ದ ಎನ್ನಲಾಗಿದೆ.

ಗುಜರಾತ್‌ ನಲ್ಲಿ ಸಿಬಿಐ ತಂಡಗಳು ಗೋದ್ರಾ, ಖೇಡಾ, ಅಹಮದಾಬಾದ್ ಮತ್ತು ಆನಂದ್‌ ನ 7 ಸ್ಥಳಗಳಲ್ಲಿ ಕೆಲವು ಶಂಕಿತರ ಮೇಲೆ ಶೋಧ ನಡೆಸುತ್ತಿವೆ. ಇದು ಗೋಧ್ರಾ ಪೊಲೀಸರು ಈ ಹಿಂದೆ ತನಿಖೆ ನಡೆಸಿದ ಎಫ್‌ಐಆರ್‌ ಗೆ ಸಂಬಂಧಿಸಿದೆ.

ಹಿಂದಿನ ಲೇಖನಹೆಚ್ಚುವರಿ ಡಿಸಿಎಂ ಬಗ್ಗೆ ಮಾತನಾಡಿದ್ರೆ ನೋಟಿಸ್: ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ
ಮುಂದಿನ ಲೇಖನಬಿಜೆಪಿ ಶಾಸಕ ಹರೀಶ್ ಪೂಂಜಾ ಸೇರಿ ೬೪ ಮಂದಿಗೆ ಬೆಂಗಳೂರು ವಿಶೇಷ ಕೋರ್ಟ್ ನಿಂದ ಸಮನ್ಸ್ ಜಾರಿ