ಮನೆ ರಾಜ್ಯ ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ – ಅಂಗನವಾಡಿ ಕಾರ್ಯಕರ್ತೆಯರು ವಜಾ; ಸಿಬ್ಬಂದಿಗೆ ನೋಟಿಸ್

ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ – ಅಂಗನವಾಡಿ ಕಾರ್ಯಕರ್ತೆಯರು ವಜಾ; ಸಿಬ್ಬಂದಿಗೆ ನೋಟಿಸ್

0

ರಾಯಚೂರು : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಆರೋಪ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಆರು ಅಂಗನವಾಡಿ ಕಾರ್ಯಕರ್ತೆಯರನ್ನು ವಜಾಗೊಳಿಸಲಾಗಿದ್ದು, 57 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಮೀಕ್ಷಾ ಕಿಟ್ ಪಡೆದು ಸೇವೆ ಆರಂಭಿಸಿಲ್ಲ ಎಂದು ದೇವದುರ್ಗದ ತಹಶೀಲ್ದಾರ್ ಅವರು ನೀಡಿದ್ದ ವರದಿಯನ್ವಯ ಆರು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಾದ ಗುಂಡಮ್ಮ, ರಂಗಮ್ಮ, ಮುತ್ತಮ್ಮ, ಚಾಂದಬಿ, ವಿಜಯಲಕ್ಷ್ಮಿ ಹಾಗೂ ರೇಣುಕಾ ಎಂಬುವವರನ್ನು ವಜಾಗೊಳಿಸಲಾಗಿದೆ.

ಲಿಂಗಸುಗೂರು ತಾಲೂಕಿನಲ್ಲಿ ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಜನ ಸಮೀಕ್ಷಾ ಸಿಬ್ಬಂದಿಗೆ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಅವರು ನೋಟಿಸ್ ಜಾರಿ ಮಾಡಿದ್ದು, ಗೈರಾದಕ್ಕೆ ಕಾರಣ ನೀಡುವಂತೆ ಸೂಚನೆ ನೀಡಿದ್ದಾರೆ.