ಹುಬ್ಬಳ್ಳಿ: ಹುಬ್ಬಳ್ಳಿಯ ಕಾಲೇಜೊಂದರಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದೆ. ಈ ಕುರಿತು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇಂಥ ಘಟನೆಗಳು ಪುನಾರಾವರ್ತನೆ ಆಗುವುದನ್ನು ತಡೆಯಲು ತಪ್ಪಿತಸ್ಥರನ್ನು ಎನ್ಕೌಂಟರ್ ಮಾಡಿ ಸಾಯಿಸುವ ಕಾನೂನು ಜಾರಿಗೆ ತರುವುದನನ್ನು ಸರ್ಕಾರಗಳು ಯೋಚಿಸಬೇಕು ಎಂದು ಸಚಿವ ಹೇಳಿದ ಲಾಡ್ ಇದು ತಮ್ಮ ವೈಯಕ್ತಿಕ ಅಭಿಪ್ರಾಯವೆಂದರು.
ಇಂಥ ಘಟನೆಗಳು ಯಾವುದೇ ರಾಜ್ಯ, ದೇಶ ಮತ್ತು ಸಮುದಾಯಗಳನ್ನು ತಲೆತಗ್ಗಿಸುವಂತೆ ಮಾಡುತ್ತವೆ, ಕೃತ್ಯ ಅತ್ಯಂತ ಹೀನ ಮತ್ತು ಖಂಡನೀಯ ಎಂದು ಹೇಳಿದರು.
ವಿರೋಧ ಪಕ್ಷಗಳ ನಾಯಕರು ಪ್ರಕರಣವನ್ನು ರಾಜಕೀಯಕ್ಕೆ ತರುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಲಾಡ್, ಇಂಥ ಪ್ರಕರಣಗಳ ಬಗ್ಗೆ ಯಾರೇ ಆಗಲಿ ಸಂವೇದನೆಹೀನರಾಗಿ ಮಾತಾಡಬಾರದು, ಇದು ರಾಜಕೀಯ ವಿಷಯವಲ್ಲ, ಹೆಣ್ಣುಮಗುವನ್ನು ಕಳೆದುಕೊಂಡಿರುವ ಕುಟುಂಬದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ, ವೃಥಾ ಕಾಮೆಂಟ್ ಗಳನ್ನು ಮಾಡುವ ಬದಲು ಅವರ ಮನೆಗೆ ಹೋಗಿ ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದರೆ ಅದು ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಲಾಡ್ ಹೇಳಿದರು.