ಮನೆ ಅಪರಾಧ ನೆಲಮಂಗಲ: ಕೆಲಸ ಸಿಗದ ದುಃಖದಲ್ಲಿ ಯುವಕ ಆತ್ಮಹತ್ಯೆ

ನೆಲಮಂಗಲ: ಕೆಲಸ ಸಿಗದ ದುಃಖದಲ್ಲಿ ಯುವಕ ಆತ್ಮಹತ್ಯೆ

0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನಕಲಕುವ ಘಟನೆ ವರದಿಯಾಗಿದೆ. ನೆಲಮಂಗಲ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದು ಬಿಹಾರ ಮೂಲದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ.

ಮೃತ ಯುವಕನನ್ನು ರಾಹುಲ್ ಕುಮಾರ್ ಯಾದವ್ (ವಯಸ್ಸು 22) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಈ ಯುವಕ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೆಲ ಸಮಯದ ಹಿಂದೆ ಕೆಲಸ ಸಿಗದೆ ಪರಿತಪಿಸುತ್ತಿದ್ದ ಈತನಿಗೆ ಜೀವನದಲ್ಲಿ ಮುನ್ನಡೆಯುವುದು ಕಷ್ಟವೆನಿಸಿತು. ಕೆಲಸವಿಲ್ಲದ್ದಿದುರಿಂದ ರಾಹುಲ್ ಊರಿಗೆ ಹಿಂದಿರುಗಲು ನಿರ್ಧಾರ ಮಾಡಿದ್ದ ಎನ್ನಲಾಗಿದೆ.

ರಾಹುಲ್ ಊರಿಗೆ ಹೋಗಲು ಬಯಸಿದಾಗ ಪೋಷಕರು ಊರಿಗೆ ಬರಬೇಡಿ ಎಂದು ಹೇಳಿದ ಹಿನ್ನೆಲೆಯಲ್ಲಿ ಅವನು ಮತ್ತಷ್ಟು ಖಿನ್ನನಾಗಿದ್ದ. ಮನೆಮಂದಿಯ ಬೆಂಬಲವೂ ಸಿಗದಿದ್ದರಿಂದ ಆತ ಖಿನ್ನತೆಯೊಂದಿಗೆ ತನ್ನ ಬಾಡಿಗೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಹುಲ್ ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.