ನವದೆಹಲಿ (Newdelhi)-ಮಾರಕ ಕೊರೊನಾ ವೈರಸ್ ನ ರೂಪಾಂತರಿ ತಳಿ ಓಮಿಕ್ರಾನ್ (omirocon) ನ ಉಪ ವೆರಿಯಂಟ್ ಬಿಎ .2.12 ಪತ್ತೆಯಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ದೆಹಲಿಯಲ್ಲಿ ಸಂಗ್ರಹಿಸಲಾದ ಬಹುತೇಕ ಸ್ಯಾಂಪಲ್ ಗಳಲ್ಲಿ ಓಮಿಕ್ರಾನ್ ಉಪ ವೆರಿಯಂಟ್ ಬಿಎ .2.12 ಪತ್ತೆಯಾಗಿದೆ.
ನಗರದಲ್ಲಿ ಇತ್ತೀಚಿಗೆ ಹೆಚ್ಚಾಗಿರುವ ಕೋವಿಡ್-19 ಸೋಂಕಿನ ಹಿಂದಿರುವ ಕಾರಣವೂ ಇದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ದೆಹಲಿಯಲ್ಲಿ ಕೆಲ ಮಾದರಿಗಳಲ್ಲಿ ಪತ್ತೆಯಾಗಿರುವ ಬಿಎ. 2.12 ಓಮಿಕ್ರಾನ್ ವೆರಿಯಂಟ್ ಇತ್ತೀಚಿಗೆ ಅಮೆರಿಕದಲ್ಲಿ ಸೋಂಕು ಹೆಚ್ಚಾಗುವಲ್ಲಿಯೂ ಕಾರಣವಾಗುತ್ತಿದೆ ಎಂದು ಐಎನ್ ಎಸ್ ಎಸಿಒಜಿ ಮೂಲಗಳು ಹೇಳಿವೆ.
ಹೊಸ ಉಪ ವೆರಿಯಂಟ್ ಬಿಎ.2.12 (ಶೇಕಡಾ 52 ರಷ್ಟು ಸ್ಯಾಂಪಲ್ ) ಮತ್ತು ಬಿಎ. 2.10( ಶೇಕಡಾ 11 ರಷ್ಟು ಸ್ಯಾಂಪಲ್ ಗಳು) ಹೆಚ್ಚಿನ ಪ್ರಸರಣವನ್ನು ತೋರಿಸುತ್ತಿವೆ. ಇತ್ತೀಚಿಗೆ ದೆಹಲಿಯಲ್ಲಿನ ಒಟ್ಟಾರೇ ಸ್ಯಾಂಪಲ್ ಗಳಲ್ಲಿ ಸುಮಾರು ಶೇ. 60 ರಷ್ಟು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಿಎ. 2.12 ವೆರಿಯಂಟ್ ಪ್ರತಿ ವಾರ ಶೇಕಡ 30 ರಿಂದ ಶೇ.90 ರಷ್ಟು ಹೆಚ್ಚಾಗುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ದೆಹಲಿಯಲ್ಲಿ ಸುಮಾರು 300 ಸ್ಯಾಂಪಲ್ ಗಳು ಜಿನೋಮ್ ಸಿಕ್ವೇನ್ಸ್ ಹೊಂದಿರುವುದಾಗಿ ಮೂಲಗಳು ಹೇಳಿವೆ. ಉತ್ತರ ಪ್ರದೇಶ ಮತ್ತು ಹರಿಯಾಣ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇದೇ ರೀತಿಯ ಉಪ ವೆರಿಯಂಟ್ ಹೆಚ್ಚಿಗೆ ಅಥವಾ ಕಡಿಮೆ ಪ್ರಮಾಣದಲ್ಲಿ ಸ್ಯಾಂಪಲ್ ಗಳಲ್ಲಿ ಪತ್ತೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.