ಹೊಸ ಮನೆಯನ್ನು ಕಟ್ಟಲು ಶುಭ ಮಾಸಗಳು :
ಶ್ಲೋಕ :
ಗೃಹ ಸಂಸ್ಥಾಪನಂ ಚೈತ್ರೇ ಧನ ಹಾನಿರ್ಮಹಾಭಯಂ |
ವೈಶಾಖೆ ಶುಭದಂ ವಿಂದ್ಯಾತ್ ಜೇಷ್ಠೇತು ವರುಣಂ ಧೃವಂ||
ಆಷಾಢೇ ಗೋಕುಲಂ ಹಂತಿ ಶ್ರಾವಣೇ ಪುತ್ರವರ್ಧನಂ |
ಪ್ರಜಾರೋಗಂ ಭಾದ್ರಪದೇ ಕುಲಹೋಶ್ವಯುಜೇ ತಥಾ||
ಕಾರ್ತಿಕೇ ಧನಲಾಭಸ್ಯಾನ್ಮಾರ್ಗಶೀ ರ್ಷೆ ಮಹಾಭಯಂ |
ಪುಷ್ಯೇಚಾಗ್ನಿ ಭಯಂ ವಿದ್ಯಾನ್ಮಾಘೇತು ಬಹು ಪುತ್ರವಾನ್ ||
ಫಾಲ್ಗುಣೇ ರತ್ನ ಲಾಭಃಸ್ಯಾನ್ಮಾಸಾನಾಂ ಚ ಶುಭಾಶುಭಂ|
ಅರ್ಥ: ಚೈತ್ರ ಮಾಸದಲ್ಲಿ ಮನೆಯನ್ನು ಕಟ್ಟಿದರೆ ಧನ ಹಾನಿಯೂ ಮತ್ತು ಮಹಾಬೀತಿಯೂ ಉಂಟಾಗುವುದು, ವೈಶಾಖ ಮಾಸದಲ್ಲಿ ಶುಭದಾಯಕವು, ಜೇಷ್ಠ ಮಾಸದಲ್ಲಿ ಮರಣಕ್ಕೆ ಸಮಾನದ ಭೀತಿಯು ಆಷಾಡ ಮಾಸದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದರೆ ದನ, ಕರು,ಗೋಮಾಹಿಷ್ಟಾಧಿಗಳ ನಾಶವು.ಶ್ರಾವಣದಲ್ಲಿ ಸಂತಾನವೃದ್ಧಿಯು ಭಾದ್ರಪದದಲ್ಲಿ ರೋಗೋಪದ್ರಗಳು ಕಾಡುವವು. ಅಶ್ವೀಜಮಾಸದಲ್ಲಿ ಕಲಹಗಳು: ಕಾರ್ತಿಕದಲ್ಲಿ ದ್ರವ್ಯ ಲಾಭವು. ಮಾರ್ಗಶಿರದಲ್ಲಿ ಭಯವು. ಪುಷ್ಯ ಮಾಸದಲ್ಲಿ ಅಗ್ನಿ ಭೀತಿ, ಭಾದೆಯು. ಮಾಘ ಮಾಸದಲ್ಲಿ ಸಂತಾನವೃದ್ಧಿಯು. ಪಾಲ್ಗುಣಗಳಲ್ಲಿ ಸಂಪತ್ತು, ಐಶ್ವರ್ಯ ಗಳ ಲಾಭ. ಈ ಪ್ರಕಾರ ಆಯಾ ಮಾಸಗಳಲ್ಲಿ ಈ ಪ್ರಕಾರ ಫಲಾಫಲಗಳುಂಟಾಗುವವು.
ಸಾರಾಂಶ : ವೈಶಾಖ ಶ್ರಾವಣ,ಕಾರ್ತಿಕ ಮತ್ತು ಮಾಘ ಈ ನಾಲ್ಕು ಮಾಸಗಳು ಗೃಹರಂಭಕ್ಕೆ (ಮೊದಲ ಥರ ಹಾಕಲಿಕ್ಕೆ )ಅತ್ಯುತ್ತಮ ಫಲದಾಯಕಗಳಾಗಿವೆ.ಆದರೆ ಪಾಲ್ಗುಣ ಮಾಸವು ಮಾತ್ರ ಸಾಧಾರಣ ಫಲದಾಯಕವಾಗಿದೆ.