ಮನೆ ರಾಜ್ಯ ಹೊಸ ವರ್ಷ ಸಂಭ್ರಮ – ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹ..!

ಹೊಸ ವರ್ಷ ಸಂಭ್ರಮ – ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹ..!

0

ಬೆಂಗಳೂರು : ಹೊಸ ವರ್ಷದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ 454.58 ಕೋಟಿ ರೂ. ಹೆಚ್ಚು ಅಬಕಾರಿ ಆದಾಯ ಸಂಗ್ರಹವಾಗಿದೆ.

ಯಾವ ವರ್ಷ ಎಷ್ಟು? – 2024ರ ಡಿ.30 ರಂದು 154.04 ಕೋಟಿ ರೂ., ಡಿ.31 ರಂದು 266. 73 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಡಿ. 30 ರಂದು 261.09 ಕೋಟಿ ರೂ., ಡಿ.31 ರಂದು 204.10 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2024 ರ ಡಿಸೆಂಬರ್‌ ತಿಂಗಳಿನಲ್ಲಿ 3,104 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಬರೋಬ್ಬರಿ 3,559.08 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ 1.59 ಲಕ್ಷ ಬಾಕ್ಸ್ ಐಎಂಎಲ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಐಎಂಎಲ್ ಮತ್ತು ಬಿಯರ್ ವ್ಯಾಪಾರದಿಂದ ಅಬಕಾರಿ ಇಲಾಖೆಗೆ ಹೆಚ್ಚುವರಿಯಾಗಿ 166.74 ಕೋಟಿ ರೂ. ಆದಾಯ ಬಂದಿದೆ.