ಬೆಂಗಳೂರು : ಸಂಸದೆ ಹಾಗು ನಟಿ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಇಂದು ಬೆಳಗ್ಗೆ ಭಾರಿ ಟ್ರೆಂಡ್ ಕೂಡ ಆಗುತ್ತಿದೆ.
ಎಸ್ ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್ ಗಳು ಕೂಡ ನಟಿ ರಮ್ಯಾ ಅವರ ಫೋಟೋಗಳು ಪೋಸ್ಟ್ ಮಾಡಿ ಕಾರ್ಡಿಯಾಕ್ ಅರೆಸ್ಟ್ ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ, ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು.
ಈ ಸುದ್ದಿ ರಮ್ಯಾ ಸಾವಿನ ಸುದ್ದಿ ಹರಿದಾಡುತ್ತಿರುವುದು ಶುದ್ಧ ಸುಳ್ಳು. ಇನ್ನು ರಮ್ಯಾ ಜೊತೆ ಸ್ವಿಜರ್ಲೆಂಡ್ ನ ಜಿನೇವಾದಲ್ಲಿರುವ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಕೂಡ ಟ್ವೀಟ್ ಮಾಡಿ ರಮ್ಯಾ ಅವರಿಗೆ ಏನೂ ಆಗಿಲ್ಲ ಎಂದು ಖಚಿತಪಡಿಸಿದ್ದಾರೆ.