ಮನೆ ಅಪರಾಧ ಎನ್’ಐಎ ಅಧಿಕಾರಿಗಳ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್’ಐ ಮುಖಂಡರು ವಶಕ್ಕೆ

ಎನ್’ಐಎ ಅಧಿಕಾರಿಗಳ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್’ಐ ಮುಖಂಡರು ವಶಕ್ಕೆ

0

ಮಂಗಳೂರು(Mangalore): ಮಂಗಳೂರಿನ ಎಸ್’ಡಿಪಿಐ, ಪಿಎಫ್ಐ ಕಚೇರಿ ಮೇಲೆ ದಾಳಿ ನಡೆಸಿದ (ರಾಷ್ಟ್ರೀಯ ತನಿಖಾ ಸಂಸ್ಥೆ) ಎನ್ಐಎ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದು, ಮೂವರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಫ್’ಐ ಮುಖಂಡರಾದ ಅಶ್ರಫ್ ಎ.ಕೆ, ಮೊಹಿದ್ದೀನ್ ಹಳೆಯಂಗಡಿ, ನವಾಜ್ ಕಾವೂರು ಎಂಬುವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಮುಂಜಾನೆ 3.30 ರ ಸುಮಾರಿಗೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್’ಡಿಪಿಐ, ಪಿಎಫ್’ಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದ ಎನ್’ಐಎ ಅಧಿಕಾರಿಗಳು, ಸುಮಾರು 5 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.

ದಾಳಿ ಕುರಿತು ಮಾಹಿತಿ ಪಡೆದ ಎಸ್’ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಮುಂಜಾನೆ 5 ಗಂಟೆಗೆ ಕಚೇರಿಗೆ ಆಗಮಿಸಿದ್ದರು.

ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಲ್ಯಾಪ್ ಟಾಪ್, ದಾಖಲೆ ಪತ್ರ ಮತ್ತು ಕಾರ್ಯಕ್ರಮದ ಫೋಟೋಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಎಸ್’ಡಿಪಿಐ ಮತ್ತು ಪಿಎಫ್’ಐಗೆ ಸೇರಿದ ಕೆಲವು ಮುಖಂಡರ ಮನೆ ಮೇಲೂ ಸಹ ದಾಳಿ ನಡೆಸಲಾಗಿದೆ.