ಮನೆ ಕಾನೂನು ಕರ್ನಾಟಕ ಸೇರಿ 9 ಕಡೆ ಎನ್ ಐ ಎ ದಾಳಿ: ಮೊಬೈಲ್​, ಬ್ಯಾಟರಿ, ದಾಖಲೆಗಳು...

ಕರ್ನಾಟಕ ಸೇರಿ 9 ಕಡೆ ಎನ್ ಐ ಎ ದಾಳಿ: ಮೊಬೈಲ್​, ಬ್ಯಾಟರಿ, ದಾಖಲೆಗಳು ವಶಕ್ಕೆ

0

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೋಮವಾರ (ನ.11) ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ಕಾರ್ಯಾಚರಣೆ ನಡೆಸಿತು.

Join Our Whatsapp Group

ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ. ಜೊತೆಗೆ ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ದ ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಆಸ್ಸಾಂನ 9 ಕಡೆ ದಾಳಿ ಮಾಡಲಾಗಿದೆ.

ಎನ್​ಐಎ ಅಧಿಕಾರಿಗಳು ಕಾರ್ಯಾಚಾರಣೆ ವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಧನಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡರು.

2023ರ ನವೆಂಬರ್‌ ನಲ್ಲಿ, ಮೊಹಮ್ಮದ್ ಎಂದು ಗುರುತಿಸಲಾದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಅಲಿಯಾಸ್​ ಮುನ್ನಾ ಖಾನ್, ಅಜರುಲ್ ಇಸ್ಲಾಂ ಅಲಿಯಾಸ್​ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಅಲಿಯಾಸ್​ ಮೊಮಿನುಲ್ ಅನ್ಸಾರಿ ಮತ್ತು ಐದನೇ ಆರೋಪಿ ಫರೀದ್ ಭಾರತೀಯ ಪ್ರಜೆಯಾನ್ನು ಬಂಧಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ.