ಮನೆ ರಾಷ್ಟ್ರೀಯ ಲಾರೆನ್ಸ್ ಬಿಷ್ಣೋಯ್’ಗೆ ಸಂಬಂಧಿಸಿದ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ ಶೋಧ

ಲಾರೆನ್ಸ್ ಬಿಷ್ಣೋಯ್’ಗೆ ಸಂಬಂಧಿಸಿದ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ ಶೋಧ

0

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಲಾರೆನ್ಸ್‌ ಬಿಷ್ಣೋಯಿ, ನೀರಜ್‌ ಬವಾನ ಹಾಗೂ ಅವರ ಸಹಚರರಿಗೆ ಸಂಬಂಧಿಸಿದ ುತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌’ಐಎ) ಶೋಧ ನಡೆಸುತ್ತಿದೆ.

ದೆಹಲಿಯ ಎನ್‌’ಸಿಆರ್‌ (ರಾಷ್ಟ್ರ ರಾಜಧಾನಿ ಪ್ರದೇಶ), ಪಂಜಾಬ್‌, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಗುಜರಾತ್‌, ಚಂಡೀಗಢ ಮತ್ತು ಉತ್ತರ ಪ್ರದೇಶದಲ್ಲಿ ಇಂದು (ಮಂಗಳವಾರ ಫೆ.21) ಮುಂಜಾನೆಯೇ ಶೋಧ ಕಾರ್ಯಾಚರಣೆ ಆರಂಭವಾಗಿದೆ.

ದರೋಡೆ, ಕಳ್ಳಸಾಗಣೆ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಎನ್‌ಐಎ 2022ರ ನವೆಂಬರ್‌ 24ರಂದು ಬಂಧಿಸಿತ್ತು.

ಹಿಂದಿನ ಲೇಖನಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕೆಎಸ್’ಆರ್’ಟಿಸಿ ಬಸ್: 40 ಮಂದಿಗೆ ಗಾಯ
ಮುಂದಿನ ಲೇಖನಕಲಬುರಗಿ: ಕೆಕೆಆರ್‌ಟಿಸಿ ಬಸ್ ಕದ್ದ ಕಳ್ಳರು