ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಸೈಂಟಿಫಿಕ್ ಡೆವಲಪ್ ಮೆಂಟ್ & ಕಮ್ಯುನಿಕೇಷನ್ ಆಫೀಸರ್, ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಇ-ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 6, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ .
ಹುದ್ದೆಯ ಮಾಹಿತಿ:
ಸೈಂಟಿಫಿಕ್ ಡೆವಲಪ್ ಮೆಂಟ್ & ಕಮ್ಯುನಿಕೇಷನ್ ಆಫೀಸರ್ -1
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್ -1
ವಿದ್ಯಾರ್ಹತೆ:
ಸೈಂಟಿಫಿಕ್ ಡೆವಲಪ್ ಮೆಂಟ್ & ಕಮ್ಯುನಿಕೇಷನ್ ಆಫೀಸರ್ – ಸ್ನಾತಕೋತ್ತರ ಪದವಿ
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್- ಪದವಿ
ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಸೈಂಟಿಫಿಕ್ ಡೆವಲಪ್ ಮೆಂಟ್ & ಕಮ್ಯುನಿಕೇಷನ್ ಆಫೀಸರ್ – ಮಾಸಿಕ ₹ 1,00,000
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್ -ಮಾಸಿಕ ₹ 70,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಬೆಂಗಳೂರು
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ adbs.project@gmail.com ಗೆ ಜುಲೈ 6 ರೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/06/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಜುಲೈ 6, 2023