ಮನೆ ಉದ್ಯೋಗ NIRDPR ನಿಂದ ಅಸಿಸ್ಟಂಟ್ ಎಡಿಟರ್, ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

NIRDPR ನಿಂದ ಅಸಿಸ್ಟಂಟ್ ಎಡಿಟರ್, ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಷ್ಟ್ರೀಯ ಸಂಸ್ಥೆ’ಯು ಮತ್ತೊಂದು ಅಧಿಸೂಚನೆ ಬಿಡುಗಡೆ ಮಾಡಿದೆ. ಇತ್ತೀಚೆಗೆ ಯಂಗ್ ಫೆಲೊ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಸಂಸ್ಥೆಯು, ಇದೀಗ ಪ್ರಾಜೆಕ್ಟ್ ಸೈಂಟಿಸ್ಟ್, ಅಸಿಸ್ಟಂಟ್ ಎಡಿಟರ್ ಪೋಸ್ಟ್’ಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆನ್’ಲೈನ್ ಅರ್ಜಿಯನ್ನು ಮೇ 11 ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

Join Our Whatsapp Group

ಹುದ್ದೆಗಳ ವಿವರ

ಪ್ರಾಜೆಕ್ಟ್ ಸೈಂಟಿಸ್ಟ್ – WAPS (ವೆಬ್ ಅಪ್ಲಿಕೇಶನ್ಸ್ ಪ್ರಾಡಕ್ಟ್ ಅಂಡ್ ಸರ್ವೀಸೆಸ್) : 6

ಪ್ರಾಜೆಕ್ಟ್ ಸೈಂಟಿಸ್ಟ್ – SNM (ಸಿಸ್ಟಮ್ಸ್ ಅಂಡ್ ನೆಟ್’ವರ್ಕ್ಸ್ ಮ್ಯಾನೇಜ್ಮೆಂಟ್) : 2

ಪ್ರಾಜೆಕ್ಟ್ ಸೈಂಟಿಸ್ಟ್ – MAD (ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್) : 2

ಪ್ರಾಜೆಕ್ಟ್ ಸೈಂಟಿಸ್ಟ್ – RS (ರಿಮೋಟ್ ಸೆನ್ಸಿಂಗ್ ಬೇಸ್ಡ್ ಅನಾಲಿಸಿಸ್): 5

ಅಸಿಸ್ಟಂಟ್ ಎಡಿಟರ್ : 1

ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಹತೆ

– ಬಿಇ/ ಬಿ.ಟೆಕ್ ವಿದ್ಯಾರ್ಹತೆಯನ್ನು ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು. ಪ್ರಾಜೆಕ್ಟ್ ಸೈಂಟಿಸ್ಟ್ – ರಿಮೋಟ್ ಸೆನ್ಸಿಂಗ್ ಬೇಸ್ಡ್ ಅನಾಲಿಸಿಸ್ ಹುದ್ದೆಗಳಿಗೆ ಎಂಎಸ್ಸಿ ಅನ್ನು ಅಗ್ರಿಕಲ್ಚರ್ ಸೈನ್ಸ್ / ಫಾರೆಸ್ಟ್ರಿ / ಜಿಯೋಗ್ರಫಿ / ಪರಿಸರ ವಿಜ್ಞಾನ ವಿಷಯಗಳಲ್ಲಿ ಪಾಸ್ ಮಾಡಿರಬೇಕು.

– ಗರಿಷ್ಠ ವಯಸ್ಸಿನ ಅರ್ಹತೆಗಳು: 35 ವರ್ಷ.

ಅಸಿಸ್ಟಂಟ್ ಎಡಿಟರ್ ಹುದ್ದೆಗೆ ಅರ್ಹತೆ

ಪದವಿಯಲ್ಲಿ ಇಂಗ್ಲಿಷ್ ಐಚ್ಛಿಕ ಶಿಕ್ಷಣ (ಬಿಎ), ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋಧ್ಯಮ ಓದಿರಬೇಕು. ಅಥವಾ ಸ್ನಾತಕೋತ್ತರ ಪದವಿ ಜತೆಗೆ ಪಬ್ಲಿಷಿಂಗ್ ಹೌಸ್ನಲ್ಲಿ 5 ವರ್ಷ ಕಾರ್ಯಾನುಭವ ಹೊಂದಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಈ ಹುದ್ದೆಗೂ ಮಾಸಿಕ Rs.50,000 ಸಂಭಾವನೆ ನೀಡಲಾಗುತ್ತದೆ.

ಮಾಸಿಕ ವೇತನ : ರೂ.50,000.

ಅರ್ಜಿ ಶುಲ್ಕ ರೂ.300.

ಅರ್ಜಿ ಸಲ್ಲಿಸುವುದು ಹೇಗೆ?

– ವೆಬ್’ಸೈಟ್ ವಿಳಾಸ http://career.nirdpr.in/ ಕ್ಕೆ ಭೇಟಿ ನೀಡಿ.

– ಓಪನ್ ಆದ ಪೇಜ್’ನಲ್ಲಿ ಹುದ್ದೆಗಳ ಲಿಸ್ಟ್ ಇರುತ್ತದೆ.

– ನೀವು ಅರ್ಜಿ ಸಲ್ಲಿಸಲು ಬಯಸಿದ ಹುದ್ದೆಯ ಮುಂದಿರುವ ‘ Register & Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.

– NIRDPR ನ ಮತ್ತೊಂದು ವೆಬ್ಪುಟ ತೆರೆಯುತ್ತದೆ. ಇಲ್ಲಿ ಸೂಚನೆಗಳನ್ನು ಓದಿಕೊಳ್ಳಿ.

– ನಂತರ ಸದರಿ ವೆಬ್ಪೇಜ್ ಕೆಳಭಾಗದಲ್ಲಿ ‘Continue’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.