ಮನೆ ರಾಷ್ಟ್ರೀಯ ಸತತ 8ನೇ ಬಾರಿಗೆ ಆಯವ್ಯಯ ಮಂಡನೆ: ನಿರ್ಮಲಾ ಸೀತಾರಾಮನ್‌ ದಾಖಲೆ

ಸತತ 8ನೇ ಬಾರಿಗೆ ಆಯವ್ಯಯ ಮಂಡನೆ: ನಿರ್ಮಲಾ ಸೀತಾರಾಮನ್‌ ದಾಖಲೆ

0

ಸಂಸತ್ತಿನಲ್ಲಿ ಪ್ರಸಕ್ತ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಆರಂಭವಾಗಿದ್ದು, ಸತತ 8ನೇ ಬಾರಿಗೆ ಆಯವ್ಯಯ ಮಂಡನೆ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಬರೆದಿದ್ದಾರೆ.

Join Our Whatsapp Group

ಸತತ 8 ಬಾರಿ ಬಜೆಟ್‌ ಮಂಡಿಸಿದ ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೋದಿಯವರ ಎರಡನೇ ಅವಧಿ ಸರ್ಕಾರ ಅಂದರೆ 2019 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾದರು. 2024ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿ ಅವರು ಹಣಕಾಸು ಖಾತೆಯನ್ನು ಉಳಿಸಿಕೊಂಡರು. ಸತತ 8ನೇ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ ಮಂಡಿಸಿದ ಬಜೆಟ್​ಗಳ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಒಟ್ಟು 10 ಬಾರಿ ಬಜೆಟ್ ಮಂಡಿಸಿದ್ದರು.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದರು. ಹಾಗೆಯೇ ಪ್ರಣಬ್ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿದ್ದಾಗ ಎಂಟು ಬಾರಿ ಬಜೆಟ್ ಮಂಡಿಸಿದ್ದರು.