ಮಂಡ್ಯ: ನಗರದ ರೈತ ಸಭಾಂಗಣದ ಆವರಣದಲ್ಲಿರುವ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಪ್ರತಿಮೆಗೆ ಅವರ 110ನೇ ಜನ್ಮದಿನದ ಅಂಗವಾಗಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಗಾಂಧಿವಾದಿ, ಮಂಡ್ಯದ ನಿಜವಾದ ಅಭಿವೃದ್ಧಿ ಹರಿಕಾರ ಕೆ.ವಿ.ಶಂಕರಗೌಡ ಅವರು ಇಂದಿಗೂ ಪ್ರಸ್ತುವಾಗಿ ನಿಲ್ಲುತ್ತಾರೆ. ಸಣ್ಣ ಹಳ್ಳಿಯಿಂದ ಬಂದು ದಿಲ್ಲಿವರೆಗೂ ಹೆಸರು ಮಾಡಿದ ಏಕೈಕ ನಾಯಕರೆಂದರೆ ಅದು ನಮ್ಮ ಕೆ.ವಿ.ಶಂಕರಗೌಡರು. ಇವರು ತಮ್ಮ ಜೀವನನ್ನೇ ಜಿಲ್ಲೆಯ ಜನರ ಸೇವೆಗೆ ಮುಡಿಪಾಗಿಟ್ಟರು ಎಂದು ಬಣ್ಣಿಸಿದರು.
ಕೆವಿಎಸ್ ಅವರು ಇಂದಿನ ರಾಜಕಾರಣಿಗಳು ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಅದನ್ನು ಪ್ರತಿಯೊಬ್ಬ ರಾಜಕಾರಣಿಯೂ ಸದ್ಭಳಕೆ ಮಾಡಿಕೊಳ್ಳಬೇಕು. ಆ ಮೂಲಕ ಕೆವಿಎಸ್ ಅವರ ದಾರಿಯಲ್ಲಿ ಸಾಗಬೇಕು. ನಾಡು, ನುಡಿ ಹಾಗೂ ಸಂಸ್ಕೃತಿಗೆ ತಮ್ಮ ಸೇವೆಯನ್ನೇ ಮುಡಿಪಾಗಿಟ್ಟಿರುವ ಕೆವಿಎಸ್ ಅವರು ರೈತರಿಗೂ ನೆರವಾಗಿದ್ದಾರೆ ಎಂದು ಬಣ್ಣಿಸಿದರು.
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ.ರಮೇಶ್, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಸದಸ್ಯ ಕೆ.ಸಿ.ರವೀಂದ್ರ, ನಿವೃತ್ತ ಡಿಎಚ್‌ಒ ಡಾ.ಮರೀಗೌಡ, ರೋಟರಿ ಸಂಸ್ಥೆಯ ಪ್ರಶಾಂತ್, ರಾಜಶೇಖರ್, ಸೋಮಶೇಖರ್, ಲಕ್ಷ್ಮೀನಾರಾಯಣ್, ಕೆ.ಎಂ.ಬಸವರಾಜು, ಕೀಲಾರ ಸುರೇಶ್, ಆನಂದ್ ಭಾಗವಹಿಸಿದ್ದರು.














