ಮಂಡ್ಯ(Mandya): ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ಪರಿಶೀಲನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ರಾಮನಗರ ಬಳಿಯ ಜೀಗನಹಳ್ಳಿ ಗ್ರಾಮದ ಹೆದ್ದಾರಿಯ ಹೆಲಿಪ್ಯಾಡ್ ನಲ್ಲಿ ಸಚಿವ ನಿತಿನ್ ಗಡ್ಕರಿ ಸಂಚರಿಸುವ ಕಾರನ್ನು ತಪಾಸಣೆ ನಡೆಸಲಾಯಿತು.
ಒಟ್ಟು ಏಳು ಕಾರುಗಳನ್ನು ತಪಾಸಣೆ ನಡೆಸಿದ ಪೊಲೀಸರು ಐದು ಕಾರುಗಳನ್ನು ತಿರಸ್ಕರಿಸಿದರು. ಇನ್ನೆರಡು ಕಾರುಗಳನ್ನು ಫೈನಲ್ ಮಾಡಿದ್ದು, ಅದರಲ್ಲಿ ಒಂದು ಆಡಿ ಹಾಗೂ ಇನ್ನೋವಾ ಕಾರುಗಳು ಫೈನಲ್ ಆಗಿದ್ದು, ಎರಡು ಕಾರುಗಳನ್ನು ಸ್ವಲ್ಪ ದೂರ ಸಂಚರಿಸಿ ಪರಿಶೀಲನೆ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು.
ರಾಮನಗರದ ಜೀಗನಹಳ್ಳಿ ಗ್ರಾಮದ ಹೆದ್ದಾರಿಯಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸಚಿವ ನಿತಿನ್ ಗಡ್ಕರಿ 20 ಕಿ.ಮೀ ದೂರ ಸಂಚಾರ ನಡೆಸಲಿದ್ದು, ಹೆದ್ದಾರಿ ಪರಿಶೀಲನೆ ನಡೆಸುವರು. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.