ಮನೆ ರಾಜ್ಯ ಜಾತಿ ಗಣತಿ ಜಾರಿ ಇನ್ನೂ ನಿರ್ಧಾರವಿಲ್ಲ : ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಮುಂದೂಡಿಕೆ

ಜಾತಿ ಗಣತಿ ಜಾರಿ ಇನ್ನೂ ನಿರ್ಧಾರವಿಲ್ಲ : ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಮುಂದೂಡಿಕೆ

0

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ಕುರಿತು ನಿರೀಕ್ಷಿತ ನಿರ್ಧಾರವಾಗದಿರುವುದು ಮತ್ತೆ ದೃಢಪಟ್ಟಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಜಾತಿ ಗಣತಿ ವಿಚಾರವನ್ನು ಪ್ರಸ್ತಾಪಿಸಲಾಯಿತು. ಈ ವೇಳೆ ಕೆಲವು ಸಚಿವರ ಅಭಿಪ್ರಾಯ ಸಂಗ್ರಹಿಸಿದ ಕುರಿತಂತೆ ಮತ್ತೆ ಈ ವಿಷಯವನ್ನು ಮುಂದೂಡಲಾಯಿತು.

ಹೌದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ಸಂಪುಟದ ಮುಂದೆ ಇಡಲಾಗಿತ್ತು. ಆದರೆ ಈ ಕುರಿತು ಕೆಲವು ಸಚಿವರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಸಂಪೂರ್ಣ ಸಮಮತದ ಕೊರತೆಯಿಂದ ವಿಷಯವನ್ನು ಇನ್ನಷ್ಟು ಚರ್ಚಿಸಲು ಮುಂದೂಡಲಾಗಿದೆ.