ಮನೆ ಕಾನೂನು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾವಧಿ ವಿಸ್ತರಣೆ ಇಲ್ಲ : ಸುಪ್ರೀಂಕೋರ್ಟ್

ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾವಧಿ ವಿಸ್ತರಣೆ ಇಲ್ಲ : ಸುಪ್ರೀಂಕೋರ್ಟ್

0

ನವದೆಹಲಿ (New delhi): ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾ ಅವಧಿಯನ್ನು ವಿಸ್ತರಣೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಮರಣ ಹೊಂದಿದ ಉದ್ಯೋಗಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕುಟುಂಬದಲ್ಲಿ ಒಬ್ಬರಿಗೆ ನೀಡುವ ಅನುಕಂಪದ ಉದ್ಯೋಗದ ಸೇವಾ ಅವಧಿ ವಿಸ್ತರಣೆ ಮಾಡಿದರೆ ಅದು ಸಂವಿಧಾನದ 14 ಮತ್ತು 15 ನೇ ವಿಧಿಗಳ ಉಲ್ಲಂಘನೆ ಆಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಬಿ.ವಿ. ನಾಗರತ್ನ ಅವರ ಪೀಠ ಅಭಿಪ್ರಾಯಪಟ್ಟಿದೆ.

ಮರಣ ಹೊಂದಿದ ಉದ್ಯೋಗಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕುಟುಂಬದಲ್ಲಿ ಒಬ್ಬರಿಗೆ ಅನುಕಂಪದ ಉದ್ಯೋಗ ನೀಡಲಾಗುತ್ತದೆ. ಅನುಕಂಪದ ಉದ್ಯೋಗ ಪಡೆದವರ ಸೇವಾ ಅವಧಿ ವಿಸ್ತರಣೆ ಮಾಡಿದರೆ ಸಂವಿಧಾನದ 14 ಮತ್ತು 15 ನೇ ವಿಧಿಗಳ ಉಲ್ಲಂಘನೆ ಜೊತೆಗೆ ಹೊಸ ನೇಮಕಾತಿಗೆ ಇದರಿಂದ ಅಡಚಣೆ ಆಗುತ್ತದೆ ನ್ಯಾಯಪೀಠ ಹೇಳಿದೆ.