ಬೆಂಗಳೂರು: ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಗೆ ಗೆಲ್ಲುವ ಅಭ್ಯರ್ಥಿಗಳಲ್ಲ, ನಿಲ್ಲುವ ಅಭ್ಯರ್ಥಿಗಳು ಸಿಗುತ್ತಿಲ್ಲ, ಹಾಗಾಗಿ ಬೇರೆ ಪಕ್ಷಗಳಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್‌ನಲ್ಲಿ ಚುಕ್ಕಾಣಿ ಹಿಡಿದವರಿಗೆ ದುಡ್ಡೇ ದೊಡ್ಡಪ್ಪ. ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಣಕ್ಕಾಗಿ ಟಿಕೆಟ್ ಮಾರಿಕೊಂಡು ಸ್ವಂತ ಸಮುದಾಯದವರಿಗೇ ಅನ್ಯಾಯ ಮಾಡಿದ್ದಾರೆಂಬ ಕೂಗು ದಾಸರಹಳ್ಳಿ ಕ್ಷೇತ್ರದಿಂದ ಕೇಳಿಬಂದಿದೆ. ಇನ್ನುಳಿದ ಕ್ಷೇತ್ರಗಳ ಕಥೆಯೂ ಇದೇ ಇರಬಹುದು ಎಂದು ಬಿಜೆಪಿ ಕಿಡಿಕಾರಿದೆ.
Saval TV on YouTube