ಮನೆ ರಾಜಕೀಯ ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ: ಸಿ ಸಿ ಪಾಟೀಲ್

ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ: ಸಿ ಸಿ ಪಾಟೀಲ್

0

ಬೆಂಗಳೂರು: ರಾಜ್ಯಕ್ಕೆ ಅನಗತ್ಯ ವೆಚ್ಚ ಮಾಡುವ ಯಾವುದೇ ಹೊಸ ಕಾಮಗಾರಿಯನ್ನು ತಮ್ಮ ಇಲಾಖೆ ಕೈಗೆತ್ತಿಕೊಳ್ಳುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಬದ್ಧರಾಗಿ ಅಸಮಾನತೆಗಳನ್ನು ನಿವಾರಿಸಿ ರಸ್ತೆ ಜಾಲಕ್ಕೆ ಹೊಸ ಶಕ್ತಿ ತುಂಬುವುದಾಗಿ ಅವರು ಹೇಳಿದರು.

ಕಳೆದ ಸರ್ಕಾರಗಳ ಅವಧಿಯಲ್ಲಿ ಬಜೆಟ್‌ನಲ್ಲಿ ಹಣ ಒದಗಿಸದೇ ಇದ್ದರೂ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಹೆಚ್ಚಿನ ಬಿಲ್‌ಗಳ ಬಾಕಿಗೆ ಕಾರಣವಾಗಿದೆ.  ಆರ್ಥಿಕ ಶಿಸ್ತನ್ನು ಕಾಪಾಡಲು ಹೆಚ್ಚುವರಿ ಕಾಮಗಾರಿಗಳ ಕೆಲಸವನ್ನು ಸರಿದೂಗಿಸಲು 2 ವರ್ಷದಿಂದ ಸಿಆರ್‌ಎಫ್ ಅಡಿಯಲ್ಲಿ ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಕಾರಣದಿಂದ ಬಿಲ್‌ಗಳು ಬಾಕಿ ಇವೆ ಎಂದರು.

ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಅನಗತ್ಯ ಯೋಜನೆಗಳಿಗೆ ಅನುಮೋದನೆ ನೀಡುವುದಿಲ್ಲ. ಕೋವಿಡ್ ಆರ್ಥಿಕ ಬಿಕ್ಕಟ್ಟನ್ನು ಹೆಚ್ಚಿಸಿದೆ ಎಂದು ಹೇಳಿದರು. ಟೆಂಡರ್ ದರಕ್ಕಿಂತ ಶೇ.25-30ರಷ್ಟು ಕಡಿಮೆ ದರ ನಮೂದಿಸಿದ ಬಿಡ್ದರ್ ಬಗ್ಗೆಯೂ ಅವರು ಮಾತನಾಡಿದರು.