ಮನೆ ರಾಜ್ಯ ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ: ಡಿ.ವಿ.ಸದಾನಂದ ಗೌಡ

ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ: ಡಿ.ವಿ.ಸದಾನಂದ ಗೌಡ

0

ಮಂಡ್ಯ : ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ. ಪಕ್ಷ ಎಲ್ಲವನ್ನು ಕೊಟ್ಟಿದೆ. 25 ವರ್ಷದ ನಂತರ ಚುನಾವಣಾ ರಾಜಕೀಯ ದೂರ ಆಗಬೇಕು ಎಂದುಕೊಂಡಿದ್ದೇ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ರಾಷ್ಟ್ರೀಯ ಕಾರ್ಯದರ್ಶಿ ಕೂಡ ಪಕ್ಷದಲ್ಲಿ ಅಗಿದ್ದೆ. ಕೇಂದ್ರದಲ್ಲಿ ಏಳು ವರ್ಷ ಮೋದಿ ಜೊತೆ ಇದ್ದೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ. ಬಿಜೆಪಿ ದೊಡ್ಡ ಮಟ್ಟಿಗೆ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವಾಗ ನನ್ನ ಶವಕ್ಕೆ  ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ಒಪ್ಪಲ್ಲ ಎಂದು ಹೇಳಿದರು.

ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಸ್ವರ್ಧೆ ಮಾಡಿದ್ದೆ. ಈ ಬಾರಿ ಆರು ತಿಂಗಳ ಮುಂಚೆ ಹೇಳಿದ್ರೆ ಹೊಸಬರನ್ನ ಹುಡುಕಲು ಅನುಕೂಲ ಆಗುತ್ತೆ. ಪಾರ್ಟಿ ಕೆಲಸ ಮಾಡಲು ಅವಕಾಶ ಕೊಡಿ. ನನ್ನ ಪಾರ್ಟಿ ಚಿರತೆ ಓಡಿಸಲು ಹೇಳಿದ್ರು ನಾನು ಮಾಡುತ್ತೇನೆ ಎಂದರು.

ಸುಮಲತಾ ಸ್ವರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಹಿನ್ನೆಡೆಯಾಗದ ಆತ್ಮ ಸ್ಥೈರ್ಯ ತುಂಬಲು ಹೇಳಿದ್ದು ನಾನು. ನಾನು ಯಾರ ಹಿಂದೆ ಚೀಲ ಹಿಡಿದುಕೊಂಡು ಹೋಗಿಲ್ಲ. ಯಾರಿಗೂ ಬೆಣ್ಣೆ ಹಾಕಿಕೊಂಡು ಹೋಗಿಲ್ಲ. ಗುಂಪುಗಾರಿಕೆ ಮಾಡಿಲ್ಲ. ಬಿಜೆಪಿ ಗುಂಪು‌ ಮಾತ್ರ ಎಂದು ಹೇಳಿದರು.

ಬರ ಅಧ್ಯಯನ ಬಗ್ಗೆ ಶಾಸಕ ಎಸ್ ಟಿ ಸೋಮಶೇಖರ್ ಟೀಕೆಗೆ ಪ್ರತಿಕ್ರಿಯಿಸಿ, ಒಂದು ಕೈಯಲ್ಲಿ ಐದು ಬೆರಳು ಸಮಾವಿಲ್ಲ. ಅದೇ ರೀತಿ ರಾಜಕೀಯ ಪಕ್ಷದಲ್ಲಿ ಕೆಲವರು ಆಚೆ ಈಚೆ ಇರುತ್ತಾರೆ ಅದು ಕಾಮನ್. ನಾನು ಆರ್ಗ್ಯೂಮೆಂಟ್ ಮಾಡಲ್ಲ. ರಾಜಕೀಯ ಪಕ್ಷದಲ್ಲಿ ‌ಎಲ್ಲರೂ ಒಂದೇ ರೀತಿ ಇರಲ್ಲ. ಬೇರೆ ಮನಸ್ಸು ಇರುತ್ತದೆ. ಪಕ್ಷದಲ್ಲಿ ಆಂತರಿಕ ವಿಚಾರ ಮಾತನಾಡಿದ ಮಾಡಿದ ವ್ಯಕ್ತಿಗೆ ನಾನು ಉತ್ತರ ಕೊಡುವುದು ಸರಿಯಲ್ಲ  ಎಂದರು.

ಸೋಮಶೇಖರ್ ಹೇಳಿರುವುದು ಕಾಂಗ್ರೆಸ್ ನವರು ರೈತರಿಗೆ ವಿಷ ಕೊಡುತ್ತಾರೆ ಎಂದು ಬಿಜೆಪಿ ಅಲ್ಲ. ಅವರು ಹೇಳಿರುವುದು ಸರಿ ಇದೆ ಎಂದು ತಿರುಗೇಟು ನೀಡಿದರು.