ಉಡುಪಿ: ಹಿಂದೂಗಳು ಹಲಾಲ್ ವಿರೋಧಿಸಿದರೆ ತಪ್ಪಲ್ಲ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಲಾಲ್ ಮಾಂಸವನ್ನು ಹಿಂದೂಗಳು ಖರೀದಿಸದಂತೆ ಹಿಂದೂ ಪರ ಸಂಘಟನೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಮುಖಂಡರು ಭೇಟಿಯಾಗಿ, ಮುಸ್ಲಿಂ ವ್ಯಾಪಾರಿಗಳಿಗೆ ಹಾಕಿರುವ ಬಹಿಷ್ಕಾರ ಬಗೆಹರಿಸುವಂತೆ ಮನವಿ ಮಾಡಿದರು. ಈಗಾಗಲೇ ವ್ಯಾಪಾರ ನಡೆಸದಂತೆ ಕಾನೂನು ಇದೆ ಉತ್ಸವ ಜಾತ್ರೆಗೆ ಗಳಲ್ಲಿ ಮುಸ್ಲೀಮರಿಗೆ ವ್ಯಾಪಾರ ಹಿಂದೂ ಸಮಾಜದ ಜನರ ನೋವು ಈಗ ಬರುತ್ತಿದೆ ಎಂದರು.
ಹಿಜಾಬ್ ವಿಚಾರದಲ್ಲೂ ಅವರ ವಿರುದ್ದ ತೀರ್ಪು ಬಂದಾಗ ಮುಸ್ಲಿಂ ಸಂಘಟನೆಗಳು ಬಂದ್, ಪ್ರತಿಭಟನೆ ನಡೆಸಿದರು. ಹೀಗಿರುವಾಗ ಹಿಂದೂಗಳು ಹಲಾಲ್ ವಿರೋಧಿಸಿದರೇ ತಪ್ಪಲ್ಲ ಎಂದು ಹೇಳಿದರು.