ಮನೆ ತಂತ್ರಜ್ಞಾನ ಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

0

ಬೆಂಗಳೂರು: ಬೇಸಿಕ್ ಫೀಚರ್ ಮೊಬೈಲ್ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿರುವ ನೋಕಿಯಾ, ಟ್ಯಾಬ್ಲೆಟ್ ಲೋಕದಲ್ಲೂ ಹೆಸರು ಗಳಿಸಿದೆ.

ನೋಕಿಯಾ, ಟಿ21 ಹೆಸರಿನ ಆಕರ್ಷಕ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದ್ದು, 10.36 ಇಂಚಿನ ಡಿಸ್‌’ಪ್ಲೇ ಹೊಂದಿದೆ.

ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಫ್ಲ್ಯಾಶ್ ಇದ್ದು, ಮುಂಭಾಗದಲ್ಲೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ ಎಂದು ನೋಕಿಯಾ ಹೇಳಿದೆ.

ಹೊಸ ನೋಕಿಯಾ ಟಿ21 ಟ್ಯಾಬ್‌’ನಲ್ಲಿ 8200 mAh ಬ್ಯಾಟರಿ, 18W ಫಾಸ್ಟ್  ಚಾರ್ಜಿಂಗ್ ವೈಶಿಷ್ಟ್ಯಗಳು ದೊರೆಯಲಿವೆ. 4 GB RAM ಮತ್ತು 64 GB ಸ್ಟೋರೇಜ್ ಇದ್ದು, ಮೈಕ್ರೋಎಸ್‌’ಡಿ ಕಾರ್ಡ್ ಮೂಲಕ 512 GB ವರೆಗೆ ವಿಸ್ತರಿಸಬಹುದಾಗಿದೆ. Unisoc T612 ಪ್ರೊಸೆಸರ್ ಬೆಂಬಲ ಇದ್ದು, Android™ 12 ಓಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಹೊಸ ನೋಕಿಯಾ ಟಿ21 ಟ್ಯಾಬ್‌ ದೇಶದಲ್ಲಿ ₹19,999 ದರ ಹೊಂದಿದೆ. ಆದರೆ, ₹2,000 ವಿಶೇಷ ಡಿಸ್ಕೌಂಟ್ ಹೊಂದಿದ್ದು, ಅದರ ಮೂಲಕ, ಗ್ರಾಹಕರಿಗೆ ₹17,999ಕ್ಕೆ ಲಭ್ಯವಾಗಲಿದೆ. ಉಳಿದಂತೆ, ಪ್ರಿ ಬುಕಿಂಗ್ ಮಾಡುವ ಗ್ರಾಹಕರಿಗೆ ₹1,000 ಡಿಸ್ಕೌಂಟ್ ಹಾಗೂ ₹1,999 ಮೌಲ್ಯದ ಫ್ಲಿಪ್ ಕವರ್ ಉಚಿತವಾಗಿ ದೊರೆಯುತ್ತದೆ, ಈ ಕೊಡುಗೆ ಸೀಮಿತ ಅವಧಿಗೆ ಇರಲಿದೆ ಎಂದು ನೋಕಿಯಾ ಹೇಳಿದೆ.