ಬೆಂಗಳೂರು(Bengaluru): ಎಚ್’ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ನೋಕಿಯಾ ಜಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸದಾಗಿ ನೋಕಿಯಾ G11 Plus ಬಿಡುಗಡೆಯಾಗಿದೆ.
ಹೊಸ ನೋಕಿಯಾ G11 Plusನೋಕಿಯಾ ನೂತನ ಸ್ಮಾರ್ಟ್‌ಫೋನ್ 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಒಕ್ಟಾ ಕೋರ್ ಉನಿಸಾಕ್ T606 ಪ್ರೊಸೆಸರ್, Mali G57 MP1 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಜತೆಗೆ 4 GB LPDDR4x RAM ಮತ್ತು 64 GB ಸ್ಟೋರೇಜ್ ಇದರಲ್ಲಿದೆ.
4G ಸಂಪರ್ಕ ಹಾಗೂ ಆ್ಯಂಡ್ರಾಯ್ಡ್ 12 ಓಎಸ್ ಮೂಲಕ ನೂತನ ನೋಕಿಯಾ ಕಾರ್ಯನಿರ್ವಹಿಸುತ್ತದೆ ಎಂದು ನೋಕಿಯಾ ತಿಳಿಸಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ನೋಕಿಯಾ G11 Plus ಸ್ಮಾರ್ಟ್‌ಫೋನ್‌ನಲ್ಲಿದ್ದು, 5000mAh ಬ್ಯಾಟರಿ ಜತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದರಲ್ಲಿದೆ.
ಬೆಲೆ ವಿವರ: ಲೇಕ್ ಬ್ಲೂ ಮತ್ತು ಚಾರ್‌ಕೋಲ್ ಗ್ರೇ ಬಣ್ಣದಲ್ಲಿ ನೂತನ ನೋಕಿಯಾ ದೇಶದಲ್ಲಿ ₹12,499 ದರಕ್ಕೆ ಲಭ್ಯವಾಗುತ್ತಿದೆ. ನೋಕಿಯಾ ಆನ್‌ಲೈನ್ ಮತ್ತು ಪ್ರಮುಖ ಇ ಕಾಮರ್ಸ್, ರಿಟೇಲ್ ಶೋರೂಮ್ ಮೂಲಕ ಗ್ರಾಹಕರು ಖರೀದಿಸಬಹುದು ಎಂದು ಕಂಪನಿ ಹೇಳಿದೆ.