ಮನೆ ರಾಜಕೀಯ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ನಡುವೆ ನಿಲ್ಲದ ವೈಯಕ್ತಿಕ ನಿಂದನೆ..!

ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ನಡುವೆ ನಿಲ್ಲದ ವೈಯಕ್ತಿಕ ನಿಂದನೆ..!

0

ಬೆಂಗಳೂರು/ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಮಧ್ಯೆ ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಿದೆ.

ಕಳೆದ ವಾರ ತಮ್ಮನ್ನು ಏಕವಚನದಲ್ಲಿ ನಿಂದಿಸಿದ್ದ ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ಕೆಂಡಮಂಡಲವಾಗಿದ್ದಾರೆ. ನನ್ನ ತಂದೆ ತಾಯಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ರೆ ಎಚ್ಚರವಿರಲಿ ಅಂತ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಪ್ರತಾಪ್ ಸಿಂಹ ಹೇಳಿಕೆ ಬೆನ್ನಲ್ಲೇ, ಮತ್ತೆ ಪ್ರದೀಪ್ ಈಶ್ವರ್ ಕತ್ತಲಲ್ಲಿ ಪ್ರದೀಪ್ ಈಶ್ವರ್ ಕಾಣ್ಸಲ್ಲ ಅಂದಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ಕತ್ತಲಲ್ಲಿ ನನ್ನ ಹುಡುಕುತ್ತಿಯಲ್ಲ ಪ್ರತಾಪ ನಿಂಗೆ ನಾಚಿಕೆ ಆಗಲ್ವಾ..? ನಾನು ಆ ತರ ಅಲ್ಲ ಎಂದು ಹೇಳಿ, ತಂದೆ ತಾಯಿಯನ್ನು ಎಳೆದು ತಂದಿದ್ದಾರೆ.