ಮನೆ ಜ್ಯೋತಿಷ್ಯ ಉತ್ತರ ಫಾಲ್ಗುಣಿ

ಉತ್ತರ ಫಾಲ್ಗುಣಿ

0

ಕ್ಷೇತ್ರ – ಸಿಂಹರಾಶಿಯಲ್ಲಿ 26 ಡಿಗ್ರಿಯಿಂದ 30 ಡಿಗ್ರಿಯವರೆಗೆ, ರಾಶಿ ಸ್ವಾಮಿ – ಸೂರ್ಯ, ನಕ್ಷತ್ರಸ್ವಾಮಿ – ಸೂರ್ಯ, ನಾಡಿ – ಆದ್ಯ, ಯೋನಿ – ಮನುಷ್ಯ, ನಾಮಾಕ್ಷರ – ಟೇ, ಶರೀರಭಾಗ – ಯಕೃತ್ ಮತ್ತು ಬೆನ್ನು ಉರಿ.

Join Our Whatsapp Group

ರೋಗಗಳು :- ಬೆನ್ನು ಮತ್ತು ತಲೆನೋವು, ಗಾಯ, ದುರ್ಘಟನೆ, ಹೊಟ್ಟೆ ನೋವು, ಹುಚ್ಚುತನ, ಪ್ಲೇಗ್, ಜ್ವರ, ಮೂರ್ಛೆ, ರಕ್ತದೊತ್ತಡ.

ಸಂರಚನೆ :- ಯಾವಾಗಲಾದರೂ ಉಗ್ರರಾಗುವವರು. ಈ ನಕ್ಷತ್ರದಲ್ಲಿ ಮಂಗಳ ಅಥವಾ ರಾಹು ಇದ್ದರೆ ಪ್ರತಿ ಹಿಂಸೆ ಮಾಡುವವರಾಗುವರು. ಉಚ್ಚಾಭಿಲಾಷೆಯನ್ನು ಹೊಂದಿರುವವರು, ಆತ್ಮ ಪ್ರಶಂಸಕ, ಸಾಹಸಿ, ಆಡಂಬರವುಳ್ಳವನು, ಬಲಶಾಲಿ ಮುಕ್ತಹಸ್ತ, ಉದಾರ ದೇಶಭಕ್ತ ಉದಾರ ಚರಿತ, ಮಹಾನುಭಾವನಾಗುವನು, ಪುಣ್ಯಾತ್ಮ, ವಿದ್ವಾನ, ವಿನಯಶೀಲಾ, ಭಾಷಣಕಾರ, ಒಳ್ಳೆಯವ, ಗುಣಶಾಲಿ, ಶ್ರೀಮಂತ ಮಾನವಂತನಾಗುವರು. ಉಚ್ಚ ಶಿಕ್ಷಣ ಪಡೆದು ಧೀಮಂತ ವ್ಯಾಪಾರಿಗಳಾಗಿ ಎಲ್ಲರ ಪ್ರೀತಿ ಪಡೆಯುವರು.

ಉದ್ಯೋಗ ಮತ್ತು ವಿಶೇಷ :- ಸರಕಾರಿ ಅಧೀನ ಸಂಸ್ಥೆಯಲ್ಲಿ ಸೇವೆ, ಆಡಳಿತ, ರಾಜ ನಿರ್ದೇಶಕ, ಡಾಕ್ಟರ ರಸಾಯನ ಶಾಸ್ತ್ರದಲ್ಲಿ ಔಷಧಿ ತಜ್ಞ, ಹಡಗು ಕಾರ್ಯ ಮಾಡುವವನು, ಇಂಜಿನಿಯರ್, ಲೇಖಕ, ರಾಜನೀತಿಜ್ಞ, ಶೇರ ವ್ಯಾಪಾರಿ, ಚಿಕಿತ್ಸಾಲಯ ನಡೆಸುವ, ನೇತ್ರಾ ಚಿಕಿತ್ಸಕ, ಪ್ರಾಚಾರ್ಯರಾಗಬಹುದು, ಹೃದಯ ರೋಗ ತಜ್ಞ ನಾಗಬಹುದಾಗಿದೆ.

ಸೂರ್ಯನ ರಾಶಿಯಲ್ಲಿ ಹಾಗೂ ಸೂರ್ಯನ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಬಲದಿಂದಲೇ ಬದುಕುವರು. ಅನೈತಿಕ ಕಾರ್ಯ ಮಾಡುವುದಿಲ್ಲ, ಸಣ್ಣ ವಯಸ್ಸಿನಲ್ಲಿಯೇ ಹಣ ಗಳಿಸುವರು, ಈ ನಕ್ಷತ್ರದ ಭಾಗವು ಅಶುಭ ಗ್ರಹಗಳಿಂದ ಕೂಡಿದ್ದಲ್ಲಿ ಅಪಖ್ಯಾತಿ ಬರಬಹುದು. ಕಾರ್ಯಕುಶಲರೇನಿಸಿ ಮಿತ್ರರೊಂದಿಗೆ ಸೇರಿ ಹಣ ಗಳಿಸುವುದರಲ್ಲಿ ನಿಷ್ಣಾತರೆನಿಸುವವರು. ಕಡಿಮೆ ಆಹಾರ ಸೇವಿಸಿ, ಕಡಿಮೆ ಸಂತಾನ ಹೊಂದಿ ಸುಖವಾಗಿರುವರು.

ಈ ನಕ್ಷತ್ರದ ಭಾಗದಲ್ಲಿ ಸೂರ್ಯನು ಭಾದ್ರಪದ ಮಾಸದಲ್ಲಿ 3.5 ದಿನವಿರುವನು, ಚಂದ್ರನು 27 ದಿನಗಳಿಗೊಮ್ಮೆ ಈ ನಕ್ಷತ್ರ ಪಾದದಲ್ಲಿ ಆರು ತಾಸು ಇರುವವನು.

ಸೂರ್ಯ ಮತ್ತು ಚಂದ್ರರು ಈ ರಾಶಿಯಿಂದ ದಾಟಿ ಹೋಗುವಾಗ ಪೂರಕ ಫಲ ಕೊಡುವವನು, ಈ ನಕ್ಷತ್ರದ ಪಾದದಲ್ಲಿ ಜನಿಸಿದವರು ಸತ್ಯವಾದಿಗಳು ಸದಾ ಹಿತಕಾರಿಗಳು ಆಗುವವರು. ಇವರಿಗೆ ಉತ್ತಮ ಸ್ಮರಣ ಶಕ್ತಿ ಇರುವರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಮಂತ್ರದಾನ :-