ಉತ್ತರ ರೈಲ್ವೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ರಿಟೈರ್ಡ್ ಸ್ಟಾಫ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅಪ್ಲೈ ಮಾಡಬಹುದು. ಅರ್ಜಿದಾರರು ಆಫ್ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಜುಲೈ 14, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಜೂನ್ 26ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ವಿದ್ಯಾರ್ಹತೆ:
ಉತ್ತರ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸರ್ಕಾರಿ ಸೇವಯಿಂದ ನಿವೃತ್ತಿ ಹೊಂದಿರಬೇಕು.
ವಯೋಮಿತಿ:
ಉತ್ತರ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು.
ಉದ್ಯೋಗದ ಸ್ಥಳ:
ಉತ್ತರ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವೇತನ:
ನಿಗದಿಪಡಿಸಿಲ್ಲ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಆಫೀಸ್ ಆಫ್ ಡೆಪ್ಯುಟಿ ಸಿಇ/ ಗತಿ ಶಕ್ತಿ ಯೂನಿಟ್
ಡಿಆರ್ಎಂ ಆಫೀಸ್
ಸ್ಟೇಟ್ ಎಂಟ್ರಿ ರೋಡ್
ನವದೆಹಲಿ
ಇನ್ನೂ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ನೋಟಿಫಿಕೇಶನ್ ಚೆಕ್ ಮಾಡಿ- Northern Railway- ನೋಟಿಫಿಕೇಶನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/06/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 14, 2023