ಮನೆ ರಾಜ್ಯ ಕೃಷಿಕರ ಪರವಿಲ್ಲದ ಬಜೆಟ್: ಬಡಗಲಪುರ ನಾಗೇಂದ್ರ

ಕೃಷಿಕರ ಪರವಿಲ್ಲದ ಬಜೆಟ್: ಬಡಗಲಪುರ ನಾಗೇಂದ್ರ

0

ಬೆಂಗಳೂರು: ಸಿ.ಎಂ ಬಸವರಾಜ ಬೊಮ್ಮಾಯಿ ಇಂದು ಬಜೆಟ್ ಮಂಡನೆ ಮಾಡಿದ್ದು, ಇದೊಂದು ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದ್ದಾರೆ.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಜೆಟ್‌’ನಲ್ಲಿ ಯಾವುದೇ ತಿರುಳು ಇಲ್ಲ. ಏಕೆಂದರೆ ರೈತರ ಆದಾಯ ಹೆಚ್ಚಿಸುವ ಯಾವುದೇ ಕಾರ್ಯಗಳಿಲ್ಲ ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಮೀಸಲಿಟ್ಟಿಲ್ಲ ಎಂದಿದ್ದಾರೆ.

ಶೂನ್ಯ ಬಡ್ಡಿತರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಆದರೆ, ಇದು ಕರ್ನಾಟಕದಲ್ಲಿರುವ ಶೇ87ರಷ್ಟು ಸಣ್ಣ ಇಳುವಳಿದಾರರಿಗೆ ಇದು ಉಪಯೋಗವಾಗುವುದಿಲ್ಲ ಎಂದು ತಿಳಿದಿದ್ದಾರೆ.

ಒಟ್ಟು ಬಜೆಟ್ 3.07 ಲಕ್ಷ ಕೋಟಿಯಲ್ಲಿ ನೀರಾವರಿಗೆ ಕೇವಲ 6.5% ಅನ್ನು ಮೀಸಲಿಡಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14-15% ವರೆಗೆ ಬಜೆಟ್ ಹಣ ಮೀಸಲಿಡುತ್ತಿವೆ. ಕೃಷಿ ತೋಟಗಾರಿಕೆಗೆ ಕೇವಲ 11% ಮೀಸಲಿಡಲಾಗಿದೆ. ಈ ಅಂಕಿ – ಅಂಶಗಳು ಕೃಷಿಕರ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಕೃಷಿಕರು ಸಾಲದ ಹೊರೆಯಿಂದ ಹೊರಬರಲು ಯಾವುದೇ ಕ್ರಮಗಳು ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.