ಮನೆ ಸುದ್ದಿ ಜಾಲ ಕೇಬಲ್ ಆಪರೇಟರ್/ನೆಟ್ವರ್ಕ್ ಸಂಸ್ಥೆಗಳಿಗೆ ಚಾ.ವಿ.ಸ.ನಿ.ನಿ ಸೂಚನೆ

ಕೇಬಲ್ ಆಪರೇಟರ್/ನೆಟ್ವರ್ಕ್ ಸಂಸ್ಥೆಗಳಿಗೆ ಚಾ.ವಿ.ಸ.ನಿ.ನಿ ಸೂಚನೆ

0

Join Our Whatsapp Group

ಮೈಸೂರು :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ವಿ.ವಿ ಮೊಹಲ್ಲಾ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ವಿ.ವಿ ಮೊಹಲ್ಲಾ, ಕುವೆಂಪುನಗರ, ಹೂಟಗಳ್ಳಿ ಮತ್ತು ರಾಮಕೃಷ್ಣನಗರ ಉಪವಿಭಾಗಗಳಲ್ಲಿನ ಹಲವಾರು ಪ್ರದೇಶಗಳಲ್ಲಿ ನಿಗಮದ ವಿದ್ಯುತ್ ಕಂಬಗಳನ್ನು ಬಳಸಿ ಅವುಗಳ ಮೇಲೆ ಡಿಶ್ ಕೇಬಲ್ ಹಾಗೂ ನೆಟ್ವರ್ಕ್ ಕೇಬಲ್ಗಳನ್ನು ಅಧಿಕೃತವಾಗಿ/ಅನಧಿಕೃತವಾಗಿ ಹಾಗೂ ಸರಿಯಾದ ಕ್ರಮ ಅನುಸರಿಸದೇ ಅವೈಜ್ಞಾನಿಕ ರೀತಿಯಲ್ಲಿ ಎಳೆದಿರುವುದು ಕಂಡುಬoದಿರುತ್ತದೆ.

ಇದು ಚಾ.ವಿ.ಸ.ನಿ.ನಿಯ ನಿಯಮಗಳಿಗೆ ವಿರುದ್ದವಾಗಿದ್ದು, ಈ ರೀತಿ ಡಿಶ್ ಕೇಬಲ್ ಹಾಗೂ ಮತ್ತಿತರೆ ಕೇಬಲ್ಗಳನ್ನು ಸರಿಯಾದ ರೀತಿಯಲ್ಲಿ ಎಳೆಯದೇ ಇರುವುದರಿಂದ ವಿದ್ಯುತ್ ಅಪಘಾತಗಳು ಘಟಿಸುವ ಸಂಭವವಿರುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಬಹುದಾಗಿರುತ್ತದೆ.

ಇoತಹ ಘಟನೆಗಳು ಸಂಭವಿಸಿದಲ್ಲಿ ಚಾ.ವಿ.ಸ.ನಿ.ನಿ.ಯು ಜವಬ್ದಾರಿಯಾಗಿರುವುದಿಲ್ಲ ಹಾಗೂ ಕೇಬಲ್ ನೆಟ್ವರ್ಕ್ ಏಜೆನ್ಸಿಗಳೇ ನೇರವಾಗಿ ಜವಬ್ದಾರರಾಗಿರುತ್ತಾರೆ. ಈ ಬಗ್ಗೆ ಹಿಂದೆಯೂ ಪತ್ರಿಕಾ ಪ್ರಕಟಣೆ ನೀಡಿ ಸೂಚಿಸಿದ್ದರೂ ಕೂಡ, ಹಲವಾರು ಡಿಶ್ ಕೇಬಲ್ ನೆಟ್ವರ್ಕ್ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದುದರಿಂದ ಸಂಬoಧಪಟ್ಟ ಕೇಬಲ್ ಆಪರೇಟರ್/ನೆಟ್ವರ್ಕ್ ಸಂಸ್ಥೆಗಳಿಗೆ ಈ ಮೂಲಕ ಮತ್ತೊಮ್ಮೆ ಸೂಚಿಸುವುದೇನೆಂದರೆ ತಾವುಗಳು ಕೂಡಲೇ ಈ ಬಗ್ಗೆ ತುರ್ತು ಕ್ರಮವಹಿಸಿ ಚಾ.ವಿ.ಸ.ನಿ.ನಿ ವಿದ್ಯುತ್ ಕಂಬಗಳನ್ನು ಬಳಸಿ ಎಳೆಯಲಾದ ಕೇಬಲ್ಗಳನ್ನು ಪರಿವೀಕ್ಷಣೆ ನಡೆಸಿ ತಪಶೀಲು ಪಟ್ಟಿ (Pole Inventory) ಹಾಗೂ ಪ್ರತಿ ಕಂಬಗಳಲ್ಲಿ ಎಳೆದಿರುವ ತಮ್ಮ ಸಂಸ್ಥೆಯ ಕೇಬಲ್ ಸಂಖ್ಯೆಗಳನ್ನು ಗುರುತಿಸಿ ಚಾ.ವಿ.ಸ.ನಿ.ನಿ ಯಿಂದ ನೀಡಲಾಗುವ ಮಂಜೂರಾತಿ ಆದೇಶದಂತೆ ನಿಯಮಾನುಸಾರ ಕ್ರಮವಹಿಸಿ ತಮ್ಮ ನೆಟ್ವರ್ಕ್ ಕೇಬಲ್ಗಳನ್ನು ಮುಂದಿನ 7 ದಿನಗಳೊಳಗಾಗಿ ಸರಿಪಡಿಸಿಕೊಳ್ಳುವುದು ಹಾಗೂ ಅನಧಿಕೃತವಾಗಿ ಕೇಬಲ್ಗಳನ್ನು ಎಳೆದಿದ್ದಲ್ಲಿ ಕೂಡಲೇ ಸಂಬoಧಪಟ್ಟ ಉಪವಿಭಾಗಗಳನ್ನು ಸಂಪರ್ಕಿಸಿ ನಿಗಮದ ನಿಯಮಾನುಸಾರ ಮಂಜೂರಾತಿ ಪಡೆದು ಹಣವನ್ನು ಪಾವತಿಸುವಂತೆ ತಿಳಿಸಲಾಗಿದೆ.

 ತಪ್ಪಿದಲ್ಲಿ ಚಾವಿಸನಿನಿ ವಿ.ವಿ ಮೊಹಲ್ಲಾ ವಿಭಾಗದಿಂದಲೇ ಪುನಃ ಯಾವುದೇ ಮುನ್ಸೂಚನೆ ನೀಡದೇ ಅಂತಹ ಕೇಬಲ್ಗಳನ್ನು ಮತ್ತು ಅನಧಿಕೃತ ಕೇಬಲ್ ನೆಟ್ವರ್ಕ್ಗಳನ್ನು ತೆರೆವುಗೊಳಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಹಾಗೂ ಇದರಿಂದ ಉಂಟಾಗುವ ಯಾವುದೇ ತೊಂದರೆಗಳಿಗೆ ಚಾ.ವಿ.ಸ.ನಿ.ನಿ ಜವಬ್ದಾರಿಯಾಗಿರುವುದಿಲ್ಲವೆಂದು ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.