ಮನೆ ರಾಜಕೀಯ ಬಿಟ್ ಕಾಯಿನ್ ಕೇಸ್ ನಲ್ಲಿ ನಲಪಾಡ್ ಗೆ ನೋಟಿಸ್- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬಿಟ್ ಕಾಯಿನ್ ಕೇಸ್ ನಲ್ಲಿ ನಲಪಾಡ್ ಗೆ ನೋಟಿಸ್- ಗೃಹ ಸಚಿವ ಡಾ.ಜಿ.ಪರಮೇಶ್ವರ್

0

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಗೆ  ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದ್ದು, ಇದೀಗ ಬಂಧನದ ಭೀತಿ ಎದುರಾಗಿದೆ.

Join Our Whatsapp Group

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಬಿಟ್ ಕಾಯಿನ್ ಕೇಸ್ ನಲ್ಲಿ ನಲಪಾಡ್ ಗೆ ನೋಟಿಸ್  ನೀಡಲಾಗಿದೆ. ಬಿಟ್ ಕಾಯಿನ್ ಪ್ರಕರಣ ತನಿಖೆ ನಡೆಯುತ್ತಿದೆ.  ನಲಪಾಡ್- ಶ್ರೀಕಿ ನಡುವೆ ವ್ಯವಹಾರ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದರು.

ಮೈಕ್ರೋ ಫೈನಾನ್ಸ್ ಕಿರುಕುಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮೈಕ್ರೋ ಫೈನಾನ್ಸ್ ಬಿಲ್ ರಾಜ್ಯಪಾಲರಿಗೆ ಕಳುಹಿಸಿದ್ದೇವೆ.   ರಾಜ್ಯಪಾಲರ ಸಹಿ ಆಗಿ ಬರಬೇಕು. ಬದಲಾವಣೆಗೆ ಸೂಚನೆ ನೀಡಿದರೇ ಸರಿ ಮಾಡುತ್ತೇವೆ ಎಂದರು.