ಮನೆ ಉದ್ಯೋಗ 120 ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

120 ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

0

ಬೆಂಗಳೂರು: 120 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ಭರ್ತಿಗೆ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಸೂಚನೆ ಹೊರಡಿಸಿದೆ.

Join Our Whatsapp Group

ಕಳೆದ ಜೂನ್​ನಲ್ಲಿ 400 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದರಲ್ಲಿ 120 ಹುದ್ದೆಗಳು ಭರ್ತಿಯಾಗದೇ ಬಾಕಿ ಉಳಿದ ಹಿನ್ನೆಲೆಯಲ್ಲಿ ಮರು ಅಧಿಸೂಚನೆ ಹೊರಡಿಸಲಾಗಿದೆ.

ವಿದ್ಯಾರ್ಹತೆ: ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿವಿಎಸ್ಸಿ, ಬಿವಿಎಸ್ಸಿ ಆ್ಯಂಡ್​ ಎಹೆಚ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಠ 18, ಗರಿಷ್ಠ 35 ವರ್ಷ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಅಭ್ಯರ್ಥಿಗಳು ಡಿಸೆಂಬರ್​ 12ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್​ 25 ಕಡೇಯ ದಿನ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ahvs.karnataka.gov.in ಇಲ್ಲಿಗೆ ಭೇಟಿ ನೀಡಿ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ ನಲ್ಲಿ ಹುದ್ದೆಗಳು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯದಲ್ಲಿ ಮಲ್ಟಿ ಟಾಸ್ಕಿಂಗ್​ ಅಫೀಷಿಯಲ್ಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಭರ್ತಿ ನಡೆಸಲಾಗುತ್ತದೆ.

ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನ ಹಾಗೂ 3 ವರ್ಷದ ಸೇವಾನುಭವ ಹೊಂದಿರುವ, 45 ವರ್ಷ ವಯೋಮಿತಿ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 30,000 ವೇತನ ನಿಗದಿಸಿದ್ದು, ಆಸಕ್ತ ಅಭ್ಯರ್ಥಿಗಳು ಇಮೇಲ್​ ಮೂಲಕ ರೆಸ್ಯೂಮ್​ ಸಲ್ಲಿಸಬಹುದು. ಇಮೇಲ್​ ವಿಳಾಸ: skillmnglr@gmail.com

ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಡಿಸೆಂಬರ್​ 30. ಹೆಚ್ಚಿನ ಮಾಹಿತಿಗೆ zpdk.karnataka.gov.in ಇಲ್ಲಿಗೆ ಭೇಟಿ ನೀಡಿ.