ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಈ ಕೆಳಗಿನ ವಿವಿಧ ಒಟ್ಟು 145 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನಿಗಧಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಕೆಳಗೆ ತಿಳಿಸಲಾದ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಯಾವ ಹುದ್ದೆಗೆ ಯಾವ ದಿನಾಂಕದಂದು ಸಂದರ್ಶನ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಹುದ್ದೆಗಳ ವಿವರ
ಡ್ಯೂಟಿ ಆಫೀಸರ್ : 1
ಜೂನಿಯರ್ ಆಫೀಸರ್ – ಪ್ಯಾಸೆಂಜರ್ : 4
ಜೂನಿಯರ್ ಆಫೀಸರ್ – ಟೆಕ್ನಿಕಲ್ : 2
ಕಸ್ಟಮರ್ ಸರ್ವೀಸ್ – ಎಕ್ಸಿಕ್ಯೂಟಿವ್: 16
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 18
ಯುಟಿಲಿಟಿ ಏಜೆಂಟ್ ಅಂಡ್ ರ್ಯಾಂಪ್ ಡ್ರೈವರ್ : 6
ಹ್ಯಾಂಡಿಮ್ಯಾನ್: 98
ಈ ಹುದ್ದೆಗಳಿಗೆ ಕನಿಷ್ಟ 18 ವರ್ಷ ಆಗಿರುವ, ಗರಿಷ್ಠ 50 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳಿಗೆ ಅನುಗುಣವಾಗಿ ದ್ವಿತೀಯ ಪಿಯುಸಿ, ಡಿಪ್ಲೊಮ / ಡಿಗ್ರಿ / ಎಂಬಿಎ ಪಾಸ್ ಮಾಡಿರಬೇಕು.
ನೇರ ಸಂದರ್ಶನ ದಿನಾಂಕ : ಏಪ್ರಿಲ್ 03 ರಿಂದ 07, 2023 ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ.
ಅರ್ಜಿ ಶುಲ್ಕ ರೂ.500.
ಎಐ ಏರ್ ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ : http://www.aiasl.in/
ಈ ಮೇಲಿನ ಹುದ್ದೆಗಳು ನಾಗ್ ಪುರ್ ಡಿವಿಷನ್ ನ ಹುದ್ದೆಗಳಾಗಿದ್ದು, ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ವಿಳಾಸ : Hotel Adi Plot, no:05, near Indian Oil Petrol Pump Airport Road, Nagpur- 440025.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ದಾಖಲೆಗಳನ್ನು ತಪ್ಪದೇ ಹಾಜರುಪಡಿಸಬೇಕು. ವೇತನವು ಹುದ್ದೆಗಳಿಗೆ ಅನುಗುಣವಾಗಿ ರೂ.19,000-32,000 ವರೆಗೆ ಇರುತ್ತದೆ.