ಮನೆ ಅಪರಾಧ ರಾಯಚೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ : ₹7.89 ಲಕ್ಷ ಮೌಲ್ಯದ ವಸ್ತು ಜಪ್ತಿ

ರಾಯಚೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ : ₹7.89 ಲಕ್ಷ ಮೌಲ್ಯದ ವಸ್ತು ಜಪ್ತಿ

0

ರಾಯಚೂರು: ಮನೆಗಳ್ಳತನದ ಹಲವಾರು ಪ್ರಕರಣಗಳಲ್ಲಿ ತೊಡಗಿದ್ದ ಕುಖ್ಯಾತ ಕಳ್ಳನನ್ನು ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತನಿಂದ ₹7.89 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಕೈಗಡಿಯಾರಗಳು ಮತ್ತು ಕ್ಯಾಮೆರಾ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ವಿರೇಶ್, ರಾಯಚೂರಿನ ಎಲ್‌ಬಿಎಸ್ ನಗರದ ನಿವಾಸಿಯಾಗಿದ್ದು, ಜಿಲ್ಲೆಯಲ್ಲಿ ಅನೇಕ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿರೇಶ್ ವಿರುದ್ಧ ರಾಯಚೂರಿನ ವಿವಿಧ ಠಾಣೆಗಳಲ್ಲಿ ಮನೆ ಮೇಲೆ ದಾಳಿ, ಕಳ್ಳತನ, ಅಕ್ರಮ ನುಸುಳಿಕೆ ಮೊದಲಾದ ಪ್ರಕರಣಗಳು ದಾಖಲಾಗಿವೆ.

ವಶಪಡಿಸಿಕೊಳ್ಳಲಾದ ವಸ್ತುಗಳ ವಿವರ: 76 ಗ್ರಾಂ ಚಿನ್ನಾಭರಣ, 382 ಗ್ರಾಂ ಬೆಳ್ಳಿ ಆಭರಣ, ಕೈಗಡಿಯಾರಗಳು, ಕ್ಯಾಮೆರಾ ಸೇರಿದಂತೆ ಇನ್ನಿತರ ದೈನಂದಿನ ಉಪಯೋಗದ ಮೌಲ್ಯಯುತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಗ್ರಾಮೀಣ, ಮಾನ್ವಿ ಮತ್ತು ಸಿಂಧನೂರು ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಎಸ್.ಪಿ.ಪುಟ್ಟಮಾದಯ್ಯ ಬಹುಮಾನ ನೀಡಿ ಸನ್ಮಾನಿಸಿದ್ದಾರೆ.