1. ಸ್ಥೂಲಕಾಯ ಮಾನವನ ಶತ್ರು. ದೇಹಕ್ಕೆ ಬೇಕಾಗುವಷ್ಟು ಆಹಾರ ಸೇವಿಸಿದರೆ ಬೊಜ್ಜು ಮೈ ಆಗುವುದಿಲ್ಲ ಆದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದರಿಂದ ಹೊಟ್ಟೆ ಮೇಲೆ ಪ್ರಿರೆಡ ಮೇಲೆ ಮಾಂಸ ಖಂಡಗಳು ಬೆಳೆದು, ಬೊಜ್ಜು ಮೈಯಾಗುತ್ತದೆ ಮಾಂಸ ತುಪ್ಪಗಳನ್ನು ಚೆನ್ನಾಗಿ ಸೇವಿಸುವುದರಿಂದ ಸ್ತೂಲಕಾಯ ಆಗುತ್ತದೆ.
2. ಬೊಜ್ಜು ಮೈ ಕರಗಿಸಲು ಹೆಚ್ಚು ವ್ಯಾಯಾಮ ಮಾಡಿ ಕಡಿಮೆ ಆಹಾರ ಸೇವಿಸಬೇಕು.ಬಿಸಿನೀರಿನ ಸ್ಥಾನ ಡಬಾಬಿತ್ಗಳ ಹೆಚ್ಚು ಉಪಯೋಗ ಮಾಡಬೇಕು.
3. ಬಿಸಿ ನೀರನ್ನು ಮೇಲಿಂದ ಮೇಲೆ ಕುಡಿಯುತ್ತಾ ಒಂದು ಹೊತ್ತು ಮಾತ್ರ ಊಟ ಮಾಡಬೇಕು
4. ವಯಸ್ಸಿಗೆ ಅನುಗುಣವಾಗಿ ಮೈ ಬೆವರಿಸುವ ವ್ಯಾಯಾಮವುದು ಬಿಸಿಲಿಗೆ ಮೈ ಒಡ್ಡುವುದು,ದೀರ್ಘವಾದಷ ರಾಡುವುದು ಪ್ರಾಣಾಯಮಾ ವನ್ನು ಮಾಡುವುದರಿಂದ ಬೊಜ್ಜು ನಿವಾರಣೆಯಾಗುತ್ತದೆ
5.ಹುರುಳಿ, ಜೋಳ,ಹೆಸರುಬೇಳೆ ಮೊಸರಿನ ತಿಳಿ ನೀರು ಜೇನುತುಪ್ಪವನ್ನು ಆಹಾರದಲ್ಲಿ ಬಳಸಬೇಕು.ಒಂದು ಲೋಟ ನೀರಿಗೆ ಜೇನ ತುಪ್ಪವನ್ನು ಆಹಾರದಲ್ಲಿ ಬಳಸಬೇಕು ಬೆಳಿಗ್ಗೆ ಎದ್ದು ಒಂದು ಲೋಟ ನೀರಿಗೆ ಜೇನು ಬೆರೆಸಿ ಕುಡಿಯಬೇಕು.. ಒಂದು ನೋಟ ನೀರಿಗೆ ನಿಂಬೆರಸ ಸೇರಿಸಿ ಕುಡಿಯಬೇಕು.
6. ತ್ರಿಫಲಾ ಎಂಬ ಚೂರ್ಣಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ.ಅದನ್ನು ಒಂದು ಚಮಚ ನೀರಿನಲ್ಲಿ ಹಾಕಿ ಮೈದುವಾಗಿ ಹಾಕಿ ಸ್ನಾನ ಮಾಡಬೇಕು
7. ಹೊಲಗಳಲ್ಲಿ ಹೇರಳವಾಗಿ ಸಿಕ್ಕುವ ಹೊನ್ನಾರಿಗಡ್ಡೆ ಗಳನ್ನು ತೊಳೆದು ಒಣಗಿಸಿ ಪುಡಿ ಮಾಡಿ ಒಂದು ಚಮಚ ಪುಡಿಯನ್ನು ನೀರಿನೊಂದಿಗೆ ದಿನಕ್ಕೆ ಮೂರು ವೇಳೆ ಆಹಾರದ ನಂತರ ಸೇವಿಸಬೇಕು.ಇದು ಸ್ಥಕಲತೆಯನ್ನು ನಿವಾರಿಸುವುದು ಹಾಗೂ ಬೊಜ್ಜಿನಿಂದಾದ ಸಂಧಿವಾದವು ನಿವಾರಣೆ ಆಗುವುದು.
8. ಹೊಲಗಳಲ್ಲಿ ಹೇರಳವಾಗಿ ಸಿಕ್ಕಿವ ಹೊನ್ನಾರಿಗೆಡ್ಡೆಗಳನ್ನು ತೊಳೆದು ಒಣಗಿಸಿ ಪುಡಿ ಮಾಡಿ ಒಂದು ಚಮಚ ಪುಡಿಯನ್ನು ನೀರಿನೊಂದಿಗೆ ದಿನಕ್ಕೆ ಮೂರು ವೇಳೆ ಆಹಾರದ ನಂತರ ಸೆವಿಸ ಬೇಕು.ಇದು ಸ್ಥೂಲತೆಯನ್ನು ನಿವಾರಿಸುವುದು ಹಾಗೂ ಬೊಜ್ಜಿನಿಂದಾದ ಸಂಧಿ ವಾತವೂ ನಿವಾರಣೆ ಆಗುವುದು.
9. ವಾಯುವಿಳಂಗದ ಬೀಜಗಳನ್ನು ಪುಡಿ ಮಾಡಿ ಬಟ್ಟೆಯಿಂದ ಶೋಧಿಸಿ ಒಂದು ಚಮಚ ಪುಡಿಗೆ ಒಂದು ಚಮಚ ಜೇನು ಸೇರಿಸಿ ಸೇವಿಸಬೇಕು ವಾಯು ವಿಳಂಗದಲ್ಲಿ ಕೊಬ್ಬನ್ನು ಕರಗಿಸಿ ಹೊರಹಾಕುವ ಗುಣವಿದೆ.
10. ಹಳನೆಕಾಯಿ ಪುಡಿಯನ್ನು ಬೆಲ್ಲದೊಡನೆ ಮಿಶ್ರ ಮಾಡಿ ಪ್ರತಿದಿನವೂ ಬಿಸಿ ನೀರಿನೊಡನೆ ಸೇವಿಸುತ್ತಾ ಬಂದರೆ ಸ್ಥೂಲ ದೇಹ ಕೃಶವಾಗುವುದು.
11. ಪ್ರತಿದಿನವೂ ಬೆಳಿಗ್ಗೆ ಎದ್ದ ಒಂದು ಔನ್ಸ್ ನಷ್ಟು ಗೋಮೂತ್ರ ಸೇವಿಸಿದರೆ ಬೊಜ್ಜು ಕರಗುವುದು
12. ನುಗ್ಗೆ ಸೊಪ್ಪನ್ನು ಪ್ರತಿದಿನವೂ ಸೇವಿಸುತ್ತಾ ಬರಲು ಬೊಜ್ಜು ಕರಗುವುದು.
13. ಸೂರಣ ಗೆಡ್ಡೆಯನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದು, ಅಥವಾ ಅದನ್ನು ಒಣಗಿಸಿ ಪುಡಿ ಮಾಡಿ, ಒಂದು ಚಮಚ ಜೇನಿನೊಡನೆ ಅಥವಾ ಬಿಸಿ ನೀರಿನಲ್ಲಿ ಕುಡಿಯಬೇಕು.
14. ಹೊನ್ನೆಮರದ ಕೆಚ್ಚನ್ನು ಒಂದು ಲೋಟದಷ್ಟು ಕಷಾಯ ಮಾಡಿಕೊಂಡು ಅದನ್ನು ಮೂರುವೇಳೆ ಕುಡಿಯುವುದರಿಂದ ಬೊಜ್ಜು ಕರಗುವುದು.
15. ಊಟಕ್ಕೆ ಮುಂಚೆ ಒಂದು ಔನ್ಸ್ ಎಳ್ಳೆಣ್ಣೆ ಕುಡಿದರೆ ತೂಕ ಕಡಿಮೆಯಾಗುವುದು.
16. ಬೆಳಿಗ್ಗೆ 10 ಕಾಳುಮೆಣಸನ್ನು ತಾಂಬೂಲದಲ್ಲಿ ಸೇವಿಸಿ ತಣ್ಣೀರಿನ ಪಾನ ಮಾಡಲು ಸ್ಥೂಲ ದೇಹ ಕೃಶಕವಾಗುವುದು.
17. ಹೊನ್ನೇಮರದ ಹೆಚ್ಚು ಚಿತ್ರ ಮೂಲ, ತಾಳಿನ ಪತ್ರೆ, ಅರಶಿನ ಇವುಗಳ ಕಷಾಯವನ್ನು ಸೇವಿಸಲು ಆನೆಗಾತ್ರ ಶರೀರ ಕೃಶವಾಗುವುದು.
18. ಪ್ರತಿದಿನವೂ ಬೆಳಿಗ್ಗೆ ಎದ್ದು ಒಂದು ಹಿಡಿಯಷ್ಟು ಎಳ್ಳು ತಿಂದು ನೀರು ಕುಡಿದರೆ ಮೈಕೃಶವಾಗುವುದು.
19. ಕಾಂತ ಭಸ್ಮವನ್ನು ಜೇನುತುಪ್ಪದಲ್ಲಿ ಪ್ರತಿದಿನವೂ ಸೇವಿಸುತ್ತಾ ಬರಲು ಸ್ಟೂಲ ರೋಗ ಹರ.
20. ಪ್ರತಿದಿನವೂ ಬೆಳಿಗಿನ ಹೊತ್ತು ಹತ್ತು ಕರಿಬೇವಿನ ಎಲೆಗಳನ್ನು ತಿಂದು ನೀರು ಕುಡಿಯುವುದರಿಂದ ಬೊಜ್ಜು ಕರಗುವುದು.
21. ಬಾಳೆಹಣ್ಣನ್ನು ಹಸುವಿನ ಹಾಲಿನಲ್ಲಿ ಕಡೆದು ಅದಕ್ಕೆ ಬಾಳೇಹೂವಿನ ರಸ ಸೇರಿಸಿ 80 ದಿನಗಳ ಕಾಲ ಸೇವಿಸುತ್ತಾ ಬಂದರೆ ತೂಕ ಕಡಿಮೆಯಾಗುವುದು.
22. ಪ್ರತಿದಿನ ಬೆಳಿಗ್ಗೆ ಒಂದೊಂದು ಟೊಮೊಟೊ ಹಣ್ಣನ್ನು ಸೇವಿಸಲು ತೂಕ ಕಡಿಮೆಯಾಗುವುದು.
23. ಸಿಹಿ ಕುಂಬಳಕಾಯಿಯನ್ನು ದಿನವೂ ಆಹಾರದಲ್ಲಿ ಸೇವಿಸುತ್ತಾ ಬರಲು ತೂಕ ಕಡಿಮೆಯಾಗುವುದು ಬೂದಕುಂಬಳ ಕಾಯಿಯನ್ನು ಆಕಾರದಲ್ಲಿ ಉಪಯೋಗಿಸುತ್ತಾ ಬಂದರೂ ತೂಕ ಕಡಿಮೆಯಾಗುತ್ತದೆ.
24. ಸೌತೆಕಾಯಿಯನ್ನು ಪ್ರತಿದಿವಸವೂ ಕೋಸಂಬರಿ ಮಾಡಿ ಸೇವಿಸುತ್ತಾ ಹಸಿ ತರಕಾರಿ ಸೇವಿಸಲು ಬೊಜ್ಜು ಕರಗುವುದು.
25. ಪ್ರತಿದಿನವೂ ಚಪಾತಿಗಳನ್ನು ಮಾತ್ರ ಸೇವಿಸುತ್ತಾ ಹಸಿ ತರಕಾರಿ ಸೇವಿಸಲು ಬೊಜ್ಜು ಕರಗುವುದು.
26. ಪ್ರತಿದಿನವೂ ರಾಗಿಯನ್ನು ಆಹಾರವಾಗಿ ಉಪಯೋಗಿಸುತ್ತಾ,ತುಪ್ಪ ಎಣ್ಣೆ ಬೆಣ್ಣೆಗಳನ್ನು ಸೇವಿಸದೆ ಇದ್ದರೆ ಸ್ಥೂಲ ದೇಹ ಕೃಶವಾಗುವುದು.
27. ಮಜ್ಜಿಗೆಯನ್ನು ಒಂದೆರಡು ತಿಂಗಳು ಬಿಡದೆ ಕುಡಿಯುತ್ತಿದ್ದರೆ,ಕೊಬ್ಬಿನ ಆಹಾರ ಸೇವಿಸದಿದ್ದರೆ ತೂಕ ಕಡಿಮೆಯಾಗುವುದು.
28. ಪ್ರತಿದಿನವೂ ಬೇಳೆ, ಕಡಲೇ ಬೇಳೆ, ಹೆಸರುಬೇಳೆಗಳನ್ನೇ ಆಹಾರವಾಗಿ ಸೇವಿಸಿ ಹಸಿ ತರಕಾರಿ ಮಿಶ್ರ ಮಾಡಿ, ಊಟ ಮಾಡಲು ದೇಹ ಕರಗುವುದು.
29. ಅಕ್ಕಿ,ತುಪ್ಪ, ಬೆಣ್ಣೆ ಎಣ್ಣೆಗಳನ್ನು ಸೇವಿಸಬಾರದು. ಹೆಸರುಬೇಳೆ, ಕೋಸಂಬರಿ ಸೌತೆಕಾಯಿ ಕೋಸಂಬರಿ ಆರಾರೂಟ ಮುಂತಾದ ತರಕಾರಿಗಳ ಕೋಸಂಬರಿ ಸೇವಿಸಿ ಹಣ್ಣುಗಳನ್ನು ತಿನ್ನುತ್ತಾ ಬಂದರೆ ಸ್ತೂಲದೇಹ ಕೃಶವಾಗುವುದು.
30. ಬೆಳ್ಳುಳ್ಳಿ ಪಾಯಸವನ್ನು ಕುಡಿಯುತ್ತಾ ಪಥ್ಯವಾಗಿರಲು ಬೊಜ್ಜು ಕರಗುವುದು.