ಮನೆ ಯೋಗಾಸನ ಮರಿಚ್ಯಾಸನ

ಮರಿಚ್ಯಾಸನ

0

    ಮರೀಚ್ಯಾಸನದ ಈ ವ್ಯತ್ಯಾಸ ಭಂಗಿಯಲ್ಲಿ ಮರೀಚ್ಯಾಸನ  2 ಮರೀಚ್ಯಾಸನ 3 ಇವೆರಡರಲ್ಲಿಯೂ ಚಲನವಲನಗಳನ್ನೂ ಜೊತೆಗೂಡಿಸಿದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಕುಳಿತು, ಕಾಲುಗಳನ್ನು ಮುಂಗಡೆಗೆ ಚಾಚಿಡಬೇಕು.

2. ಬಳಿಕ ಬಲಗಾಲ ಮಂಡಿಯನ್ನು ಬಗ್ಗಿಸಿ ಬಲಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಬೇಕು.ಆಮೇಲೆ ಬಲ ಹಿಮ್ಮಡಿಯು ನಾಭಿ ಸ್ಥಾನವನ್ನು ಒತ್ತುವಂತೆಯೂ ಕಾಲ ಬೆರಳುಗಳು ನಿಳವಾಗಿ ತುದಿಮಾಡುವಂತೆಯೂ ಇರಬೇಕು.ಈಗ ಬಲಗಾಲು ಅರ್ಧ ಪದ್ಮಾವಾಗಿರುತ್ತದೆ.

3. ಅನಂತರ ಎಡಗಾಲನ್ನು ಮಂಡಿಯಲ್ಲಿ ಬಗ್ಗಿಸಿ,ಎಡದಂಗಾಲು ಮತ್ತು ಹಿಮ್ಮಡಿಗಳನ್ನು ನೆಲಕ್ಕೆ ಒತ್ತಿಡಬೇಕು.ಆ ಬಳಿಕ,ಕಣಕಾಲನ್ನು ನೆಲಕ್ಕೆ ಲಂಬವಾಗಿರಿಸುವಾಗ ಎಡತೊಡೆ ಮತ್ತು ಮೀನ ಖಂಡಗಳು ಒಂದೊನ್ನೂಂ ಮುಟ್ಟುವಂತೆಯೂ ಗುದ ಗುಹ್ಯಗಳ ನಡುತಾಣವನ್ನು ಮುಟ್ಟುವಂತೆಯೂ  ಇರಬೇಕು.

4. ಬಳಿಕ,ಉಸಿರನ್ನು ಹೊರಬಿಡುತ್ತಾ ಬೆನ್ನೆಲುಬನ್ನು 90 ಡಿಗ್ರಿಗಳಷ್ಟು ಎಡಗಡೆಗೆ ತಿರುಗಿಸಿ, ಎಳೆತೊಡೆಯ ಹೊರಬದಿಯನ್ನು ಬಲ ಕಂಕುಳ ಮುಟ್ಟುವಂತಿರಬೇಕು.

5.ಇದಾದಮೇಲೆ,ಬಲಭುಜವನ್ನು ಎಡಮಂಡಿಯಿಂದ ದೂರವಾಗಿರಿಸಿ,ಬಲತೋಳನ್ನು ಮುಂದಕ್ಕೆ ಚಾಚಿ,ತೇಲುವ ಪಕ್ಕೆ ಲುಬುಗಳ ಹಿಂಬದಿಯ ಭಾಗವನ್ನು ಹಿಗ್ಗಿಸುವುದರ ಮೂಲಕ ಬೆನ್ನು ಮೂಳೆಯನ್ನು ಮತ್ತಷ್ಟು ಎಡಗಡೆಗೆ ತಿರುಗಿಸಬೇಕು. ಈಗ ಒಂದು ಸಲ ಉಸಿರನ್ನು ಒಳಕ್ಕೆಳೆಯಬೇಕು.

6. ತರುವಾಯ ಉಸಿರನ್ನು ಹೊರಹೋಗಿಸಿ, ಬಲತೋಲನ್ನು ಎಡಮಂಡಿಯ ಸುತ್ತ ಸರಿಸಿ,ಬಲಮೊಣಕೈಯನ್ನು ಭಾಗಿಸಿ,ಬಲಗೈಯನ್ನು ಡಟೊಂಕದ ಹಿಂಬದಿಯಲ್ಲಿರಿಸಬೇಕು. ಎಡ ಮಂಡಿಯ ಬಲಕಂಕುಳ ಈ ಸ್ಥಿತಿಯಲ್ಲಿ ಬಲವಾದ ಬಂಧನ ಕ್ಕೊಳಗಾಗುತ್ತವೆ. ಈಗಲೂ ಒಂದು ಸಲ ಉಸಿರನ್ನು ಒಳಕ್ಕೆಳೆದುಕೊಳ್ಳಬೇಕು.

7. ಆಮೇಲೆ ಆಳವಾಗಿ ಉಸಿರನ್ನು ಹೊರಬಿಡುತ್ತ, ಬಲಭುಜದಿಂದ ಬೆನ್ನಹಿಂದಕ್ಕೆ ಎಡತೋಳನ್ನು ತಿರುಚಿಟ್ಟು ಬೆನ್ನಹಿಂದೆಯೇ ಏಡಗೈಯಿಂದ ಬಲಗೈಯನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.ಆಮೇಲೆ ಎದೆಯನ್ನು ಹಿಗ್ಗಿಸಿ, ಬೆನ್ನೆಲುಬನ್ನು ಮೇಲಕ್ಕೆ ಸೆಳೆದಿಡಬೇಕು.

8. ಈ ಸ್ಥಿತಿಯಲ್ಲಿ, ಸುಮಾರು 30 ಸೆಕೆಂಡುಗಳ  ಕಾಲವಿರಬೇಕು.ಆಗ ಉಸಿರಾಟವು ವೇಗವಾಗಿ ನಡೆಯುತ್ತದೆ.

9. ಬಳಿಕ ಕೈಗಳನ್ನೂ ಕಾಲುಗಳನ್ನೂ ನೇರಮಾಡಿಡ ಬೇಕು.

10. ಇದಾದ ಮೇಲೆ ಇನ್ನೊಂದು ಪಕ್ಕದಲ್ಲಿಯೂ ಈ ಭಂಗಿಯನ್ನು  ಅಭ್ಯಸಿಸಬೇಕು. ಹೀಗೆ ಮಾಡುವಾಗ ಮೇಲಿನ ಅಭ್ಯಾಸಕ್ರಮದ ವಿವರಣೆಯಲ್ಲಿ ಬಲ ಎಡವೆಂಬ ಪದಗಳೆಡೆಯಲ್ಲಿ ಎಡ ಬಲ ಎಂಬುದನ್ನು ಅಳವಡಿಸಿಕೊಂಡು ಈ ಭಂಗಿಯನ್ನು ಅಭ್ಯಸಿಸಬೇಕು.ಭಂಗಿಗಳಲ್ಲಿ ನೆಲೆಸುವ ಕಾಲ ಸಮವಾಗಿರಬೇಕು. ನಂತರ ಕೈಗಳ ಬಂಧವನ್ನು ಸಡಿಲಿಸಿ ಕಾಲುಗಳನ್ನು ನೀಳವಾಗಿಸಿ, ವಿಮಿಶ್ರಮಿಸಿಕೊಳ್ಳಬೇಕು.

ಪರಿಣಾಮಗಳು

   ಈ ಭಂಗಿಯಲ್ಲಿ ಹೊಕ್ಕಳಿನೆಡೆಯನ್ನು ಹಿಮ್ಮಡಿ ಯಿಂದೊತ್ತುವುದರಿಂದ ಹಾಗೂ ಬೆನ್ನಿನ ಹಿಂಬದಿಯಲ್ಲಿ ಕೈಗಳನ್ನು ಬಿಗಿಯಾಗಿ ಹಿಡಿಯುವುದರಿಂದ ಹೊಕ್ಕಳಿನ ಸುತ್ತಲಿರುವ ನರಗಳಿಗೆ ತಾರುಣ್ಯವನ್ನು ಕೊಡುತ್ತದೆ. ಅಲ್ಲದೆ ಇದು ಪಿತ್ತಜನಾಂಗ ಗುಲ್ಮ ಮತ್ತು ಮೇದೋ ಜೀರಕಗಳಿಗೆ ಲವಲವಿಕೆಯನ್ನು ಕೊಟ್ಟು ಅವುಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.ಇದರ ಜೊತೆಗೆ ಈ ಆಸನದ ಭಂಗಿಯು ಹೆಗಲಿನ ಕೀಲುಗಳಲ್ಲಿ ಶೇಖರವಾಗುವ ಸುಣ್ಣದ ಭಾಗವನ್ನು ತಗ್ಗಿಸುವುದರಿಂದ ಭುಜಗಳು ಸರಾಗವಾಗಿ ತಿರುಗುವಂತೆ ಮಾಡುವುದಕ್ಕೆ ನೇರವಾಗುತ್ತದೆ.