ಮನೆ ರಾಷ್ಟ್ರೀಯ ಓಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಹೃದಯಾಘಾತದಿಂದ ನಿಧನ

ಓಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಹೃದಯಾಘಾತದಿಂದ ನಿಧನ

0

ಚಿಕ್ಕಮಗಳೂರು: ಓಡಿಶಾ ರೈಲು ಅಪಘಾತದಿಂದ ಪಾರಾಗಿದ್ದ ಕನ್ನಡಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ನಡದಿದೆ.

Join Our Whatsapp Group

ಅಪಘಾತದಲ್ಲಿ ಬದುಕುಳಿದ ಯಾತ್ರಿಕ, ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (72) ಮೃತ ದುರ್ದೈವಿ.

ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಜನರಲ್ಲಿ ಇವರೂ ಒಬ್ಬರಾಗಿದ್ದು, ಹಿಂದಿರುಗುವಾಗ ಹೃದಯಾಘಾತವಾಗಿದೆ ಎನ್ನಲಾಗಿದೆ.

ಯುಪಿಯ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಶವಪರೀಕ್ಷೆಗಾಗಿ ಸಂಬಂಧಿಕರು ಕಾಯುತ್ತಿದ್ದಾರೆ.