ಮನೆ ಸುದ್ದಿ ಜಾಲ 10 ದಿನದಲ್ಲಿ 9ನೇ ಬಾರಿ ತೈಲ ಬೆಲೆ ಏರಿಕೆ

10 ದಿನದಲ್ಲಿ 9ನೇ ಬಾರಿ ತೈಲ ಬೆಲೆ ಏರಿಕೆ

0

ನವದೆಹಲಿ: ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಕೂಡ ದರ  ಏರಿಕೆಯಾಗಿದೆ.  ಇದರೊಂದಿಗೆ ಕಳೆದ 10 ದಿನಗಳಲ್ಲಿ 9ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ಪೈಸೆ ಹೆಚ್ಚಳದೊಂದಿಗೆ ಪ್ರಸ್ತುತ ದರ ಲೀ.ಗೆ ₹101.81 ಗೆ ತಲುಪಿದೆ. ಡೀಸೆಲ್ ದರ ಲೀ.ಗೆ ₹93.07 ಇದೆ.ಮುಂಬೈನಲ್ಲಿ ಪೆಟ್ರೋಲ್‌ ಬೆಲೆಯು ಲೀಟರಿಗೆ ₹116.72 ಹಾಗೂ ಡೀಸೆಲ್‌ ಬೆಲೆಯು ₹100.94 ಕ್ಕೆ ಏರಿಕೆಯಾಗಿದೆ.

ಸ್ಥಳೀಯ ಮಾರಾಟ ದರಕ್ಕೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ತೈಲ ದರದಲ್ಲಿ ವ್ಯತ್ಯಾಸ ಆಗುತ್ತದೆ. ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹107.28 ಮತ್ತು ₹91.25 ಕ್ಕೆ ತಲುಪಿದೆ.