ಹೊಸದಿಲ್ಲಿ: 13 ಭಾರತೀಯರು ಸೇರಿದಂತೆ 16 ಸಿಬಂದಿಯನ್ನು ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್ ಒಮಾನ್ ಕರಾವಳಿಯಲ್ಲಿ ಮುಳುಗಿದೆ ಎಂದು ದೇಶದ ಕಡಲ ಭದ್ರತಾ ಕೇಂದ್ರ ಮಂಗಳವಾರ ತಿಳಿಸಿದೆ.
ಸಿಬ್ಬಂದಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಮತ್ತು ರಕ್ಷಣ ಕಾರ್ಯಾಚರಣೆ ನಡೆಯುತ್ತಿದೆ.
ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ‘ಪ್ರೆಸ್ಟೀಜ್ ಫಾಲ್ಕನ್’ ನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು ಎಂದು ಕಡಲ ಭದ್ರತಾ ಕೇಂದ್ರವು ಟ್ವೀಟ್ ಮಾಡಿದೆ. ಸೋಮವಾರ ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ.
LSEG ಯ ಶಿಪ್ಪಿಂಗ್ ಮಾಹಿತಿಯ ಪ್ರಕಾರ ಟ್ಯಾಂಕರ್ ಒಮಾನ್ ಬಂದರಿನ ಏಡೆನ್‌ಗೆ ಹೋಗುತ್ತಿತ್ತು. ತೈಲ ಟ್ಯಾಂಕರ್ ಮುಳುಗಿದೆ ಮತ್ತು ತಲೆಕೆಳಗಾದಿದೆ ಎಂದು ಒಮಾನ್‌ನ ಕಡಲ ಭದ್ರತಾ ಕೇಂದ್ರವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಆದಾಗ್ಯೂ, ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.
ನೌಕೆಯು 2007 ರಲ್ಲಿ ನಿರ್ಮಿಸಲಾದ 117-ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು LSEG ಯ ಶಿಪ್ಪಿಂಗ್ ಮಾಹಿತಿಯಲ್ಲಿ ಕಂಡು ಬಂದಿದೆ. ಈ ರೀತಿಯ ಸಣ್ಣ ಟ್ಯಾಂಕರ್‌ಗಳನ್ನು ಸಾಮಾನ್ಯವಾಗಿ ಸಣ್ಣ ಪ್ರಯಾಣಕ್ಕಾಗಿ ನಿಯೋಜಿಸಲಾಗುತ್ತದೆ.
ಡುಕ್ಮ್ ಬಂದರು ಒಮಾನ್ ನ ನೈಋತ್ಯ ಕರಾವಳಿಯಲ್ಲಿದ್ದು, ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ. ಪ್ರಮುಖ ತೈಲ ಸಂಸ್ಕರಣಾಗಾರ ಡುಕ್ಮ್‌ನ ವಿಶಾಲವಾದ ಕೈಗಾರಿಕಾ ವಲಯದ ಒಂದು ಭಾಗವಾಗಿ ಅತಿದೊಡ್ಡ ಏಕ ಆರ್ಥಿಕ ಕೇಂದ್ರವಾಗಿದೆ.