ಮನೆ ಮನರಂಜನೆ “ಒಲವೇ ಮಂದಾರ -2′ ಚಿತ್ರ ವಿಮರ್ಶೆ

“ಒಲವೇ ಮಂದಾರ -2′ ಚಿತ್ರ ವಿಮರ್ಶೆ

0

ಒಂದು ಕಡೆ ಪ್ರೀತಿಸಿದ ಹುಡುಗಿ, ಮತ್ತೂಂದು ಕಡೆ ಆಕೆಯ ಕುಟುಂಬ ಅಡ್ಡ ಗಾಲು, ಇದರ ನಡುವೆ ಪ್ರೀತಿಸಿದ ಹುಡುಗಿ ಹಾಗೂ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ.. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮುಗ್ಧ ಜೋಡಿಯ ಪ್ರೀತಿ ಉಳಿಯುತ್ತಾ ಅಥವಾ ಸಾಯುತ್ತಾ… ಇಂತಹ ಅಂಶಗಳೊಂದಿಗೆ ಈ ವಾರ ತೆರೆಗೆ ಬಂದಿರುವ ಚಿತ್ರ “ಒಲವೇ ಮಂದಾರ -2′.

ಇಡೀ ಸಿನಿಮಾ ಒಂದು ಲವ್‌ಸ್ಟೋರಿ ಹಿನ್ನೆಲೆಯಲ್ಲಿ ಸಾಗಿ ಬಂದಿದೆ. ಹಳ್ಳಿಯಲ್ಲಿರುವ ನಾಯಕ, ಆತನ ಊರಿನ ಪ್ರೀತಿ, ಕಣ್ಣಿಗೆ ಬೀಳುವ ಮುದ್ದಾದ ಹುಡುಗಿ, ತವಕ, ತಲ್ಲಣ, ಕೊನೆಗೂ ಪ್ರೀತಿಸಿದ ಹುಡುಗಿ ಸಿಕ್ಕ ಖುಷಿ… ಹೀಗೆ ಸಾಗುವ ಚಿತ್ರದ ಮಧ್ಯದಲ್ಲೊಂದು ಟ್ವಿಸ್ಟ್‌… ಸಂಪೂರ್ಣ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಸಿನಿಮಾವಿದು…

ಆರಂಭದಲ್ಲಿ ಎಲ್ಲಾ ಚಿತ್ರಗಳಂತೆ ನಾಯಕ, ಆತನ ಸ್ನೇಹಿತರು, ಪ್ರೀತಿಯ ಹಿಂದಿನ ಪಯಣದ ಮೂಲಕ ಸಾಗುವ ಸಿನಿಮಾ ಮೂಲಕಥೆಯನ್ನು ಬಿಟ್ಟು ಹೋಗಿಲ್ಲ ಎಂಬುದು ನೆಮ್ಮದಿಯ ವಿಚಾರ. ಇಡೀ ಸಿನಿಮಾದ ಹೈಲೈಟ್‌ ಎಂದರೆ ಚಿತ್ರದ ಕ್ಲೈಮ್ಯಾಕ್ಸ್‌.

ಈ ವಿಚಾರದಲ್ಲಿ ನಿರ್ದೇಶಕರು ಕೊಂಚ ಹೊಸದಾಗಿ ಯೋಚಿಸುವ ಮೂಲಕ ಚಿತ್ರದ ಕ್ಲೈಮ್ಯಾಕ್ಸ್‌ ತುಂಬಾ ಫ್ರೆಶ್‌ ಎನಿಸುತ್ತದೆ. ಆ ಮಟ್ಟಿಗೆ “ಒಲವೇ ಮಂದಾರ-2′ ಒಂದು ಪ್ರಯತ್ನವಾಗಿ ಮೆಚ್ಚುವಂತಹ ಸಿನಿಮಾ.

ನಾಯಕ ಸನತ್‌ ಲವರ್‌ಬಾಯ್‌ ಆಗಿ ಇಷ್ಟವಾಗುತ್ತಾರೆ. ಉಳಿದಂತೆ ಪ್ರಜ್ಞಾಭಟ್‌, ಅನೂಪ ಸತೀಶ್‌, ಭವ್ಯಾ ಸೇರಿದಂತೆ ಇತರೆ ಹಿರಿಯ ಕಲಾವಿದರು ನಟಿಸಿದ್ದಾರೆ. ಕಿರಣ್‌ ಸಂಗೀತ, ತನ್ವೀಕ್‌ ಛಾಯಾಗ್ರಹಣ ಚಿತ್ರಕ್ಕಿದೆ.